ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿಯ ವೇತನ ನೀಡುವ ವಿಚಾರದಲ್ಲಿ ಸಮಿತಿ ರಚನೆ ಮಾಡಿ ವರದಿ ನೀಡಿದ ನಂತರ ಹೆಚ್ಚಳ ಮಾಡುವ ಮಾತುಗಳು ಕೇಳಿ ಬರುತ್ತಿದ್ದು ಇನ್ನೂ ಇದನ್ನು ಮಾಡಲು ಇನ್ನೂ ಕೂಡಾ ಮೀನಾ ಮೇಷ ಮಾಡಲಾಗುತ್ತಿದ್ದು ಇನ್ನೂ ಇತ್ತ ಸಭಾಧ್ಯ ಕ್ಷರು,ಉಪ ಸಭಾಧ್ಯಕ್ಷರು,ಸಭಾಪತಿ,ಉಪ ಸಭಾಪತಿ, ವಿರೋಧ ಪಕ್ಷದ ನಾಯಕರು,ಸರ್ಕಾರಿ ಮುಖ್ಯ ಸಚೇತ ಕರು,ವಿರೋಧ ಪಕ್ಷದ ಮುಖ್ಯ ಸಚೇತಕರು,ವಿಧಾನಸಭೆ, ವಿಧಾನ ಪರಿಷತ್ ಸದಸ್ಯರ ವೇತನ ಮತ್ತು ಭತ್ಯೆ ಹೆಚ್ಚಳ ವನ್ನು ಮಾಡಲಾಗಿದೆ.ಇದಕ್ಕೆ ಯಾವ ಸಮಿತಿ ಯಾರ ಅನುಮತಿ ಅವಕಾಶ ಕಲ್ಪಿಸದೆ ಏಕಾಏಕಿ ಯಾಗಿ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳಿಸಲಾಗಿದ್ದು ಕರ್ನಾಟಕ ವಿಧಾನಮಂಡಲದವರ ಸಂಬಳಗಳು ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಕಿತ ಹಾಕಿದ್ದಾರೆ.ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಗದ್ದ ಲದ ಮಧ್ಯೆ ಯಾವುದೇ ಚರ್ಚೆ ನಡೆಯದೆ ಎರಡೂ ಸದನ ಗಳಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು


2015ರಿಂದ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಆಗಿರಲಿಲ್ಲ.ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಸಾಕಷ್ಟು ಶಾಸಕರು ಸಂಕಷ್ಟ ಅನುಭವಿಸಿದ್ದಾರೆ. ಆದ್ದರಿಂದ ವೇತನ ಹೆಚ್ಚಿಸಲು ಅನುವಾಗುವಂತೆ ಕಾಯ್ದೆ ತಿದ್ದುಪಡಿಗೆ ಉದ್ದೇಶಿಸಲಾಗಿದೆ ಎಂದು ಮಸೂದೆ ಮಂಡಿಸಿದ್ದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧು ಸ್ವಾಮಿ ಸಮರ್ಥನೆ ನೀಡಿದ್ದರು ಸಧ್ಯ ಇದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ


ಬೆಲೆ ಸೂಚ್ಯಂಕದ ಆಧಾರದಲ್ಲಿ 2023 ಏಪ್ರಿಲ್ 1ರಿಂದ ಪ್ರತಿ 5 ವರ್ಷ ಕ್ಕೊಮ್ಮೆ ಸಂಬಳ ಹೆಚ್ಚಿಸುವ ಬಗ್ಗೆಯೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.ವಿಧಾನ ಮಂಡಳ ದವರ ಸಂಬಳಗಳು ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಪರಿಷ್ಕರಣೆಯಿಂದ ವಾರ್ಷಿಕ ₹ 67 ಕೋಟಿ ಹೆಚ್ಚುವರಿ ವೆಚ್ಚ ಉಂಟಾಗಲಿದೆ ಎಂಬ ಮಾಹಿತಿ ಸಿಕ್ಕಿದ್ದು ಇದರ ನಡುವೆ ಇತ್ತ ರಾಜ್ಯ ಸರ್ಕಾರಿ ನೌಕರರ ಸಂಬಳ ಹೆಚ್ಚಳ ಕುರಿತು ನೂರೆಂಟು ವಿಘ್ನಗಳು ಸಮಿತಿ ರಚನೆ ಯ ಮಾತು ಗಳು ಕೇಳಿ ಬರುತ್ತಿದ್ದು ಯಾವಾಗ ಜಾರಿಗೆ ಬರುತ್ತದೆ ಎಂಬ ಮಾತುಗಳು ರಾಜ್ಯದ ಸರ್ಕಾರಿ ನೌಕರರಿಂದ ಕೇಳಿ ಬರುತ್ತಿದ್ದು ಕಾದು ನೋಡಬೇಕಿದೆ.