ಧಾರವಾಡ –
ಸಿಪಿಐ ಶ್ರೀಧರ ಸತಾರೆ ಅಮಾನತ್ತು: ಗ್ರಾಮೀಣ ಪೊಲೀಸ್ ಠಾಣೆಯೆದುರು ಹೋರಾಟ
ಧಾರವಾಡ – ಹೌದು ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕುತಂತ್ರದಿಂದ ದಕ್ಷ ಅಧಿಕಾರಿಯನ್ನ ಅಮಾನತ್ತು ಮಾಡಲಾಗಿದೆ ಎಂದು ದಲಿತ ಮುಖಂಡರು ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಹೋರಾಟ ನಡೆಸಿದರು.

ಶ್ರೀಧರ ಸತಾರೆ ಓರ್ವ ಉತ್ತಮ ಅಧಿಕಾರಿ ಅವರನ್ನ ಉದ್ದೇಶಪೂರ್ವಕವಾಗಿ ಅಮಾನತ್ತು ಮಾಡಲಾಗಿದೆ.ಈ ಆದೇಶವನ್ನ ಹಿಂದೆ ಪಡೆಯದೇ ಹೋದರೆ ಹೋರಾಟವನ್ನ ತೀವ್ರಗೊಳಿಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗೂ ಮನವಿಯನ್ನ ಕೊಟ್ಟು 7 ದಿನದ ಸಮಯವನ್ನ ನೀಡುತ್ತೇವೆ.ಅಮಾನತ್ತು ಹಿಂದೆ ಪಡೆಯದೇ ಹೋದರೆ ಹೋರಾಟವನ್ನ ತೀವ್ರಗೊಳಿಸಲಾಗುವುದೆಂದು ಹೇಳಿದರು…