ಬೆಂಗಳೂರು –
ಈ ವರ್ಷವೂ ಕೂಡಾ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಈ ವರ್ಷವೂ ಸಹ ಸೈಕಲ್ ಭಾಗ್ಯವಿಲ್ಲ ಹೌದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಗೆ ಇನ್ನು ಒಪ್ಪಿಗೆ ಸಿಕ್ಕಿಲ್ಲ.2022-23ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16 ರಿಂದ ಆರಂಭವಾಗಲಿದೆ.ಆದರೆ ಸರ್ಕಾರದ ಒಪ್ಪಿಗೆ ಸಿಗದ ಕಾರಣ ಈ ಬಾರಿಯೂ ವಿದ್ಯಾರ್ಥಿಗಳಿಗೆ ಸೈಕಲ್ ತುಳಿಯುವ ಭಾಗ್ಯವಿಲ್ಲ.ಕರ್ನಾಟಕ ಸರ್ಕಾರ 2006-07ನೇ ಸಾಲಿನಲ್ಲಿ ಸೈಕಲ್ ನೀಡುವ ಯೋಜನೆ ಆರಂಭಿಸಿತ್ತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜ ನೆಗೆ 792 ಕೋಟಿ ರೂ.ಬೇಕು ಎಂದು ಅಂದಾಜಿಸಲಾಗಿದೆ. ಅಂದಾಜು ವೆಚ್ಚ ಸೇರಿದಂತೆ ಯೋಜನೆ ವಿವರಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಣಕಾಸು ಇಲಾಖೆಗೆ ಕಳುಹಿಸಿದೆ ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ
ಒಂದು ವೇಳೆ ಇಲಾಖೆ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿ ದರೆ ಈ ಬಾರಿಯೂ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವುದಿಲ್ಲ.ಕೋವಿಡ್ ಪರಿಸ್ಥಿತಿಯ ಕಾರಣ ಕಳೆದ ಎರಡು ವರ್ಷಗಳಿಂದ ಸೈಕಲ್ ವಿತರಣೆ ಮಾಡಿಲ್ಲ. 2006 07 ರಲ್ಲಿ ಯೋಜನೆ ಆರಂಭವಾದಾಗ ವಿದ್ಯಾರ್ಥಿನಿಯರಿಗೆ ಮಾತ್ರ ಸೈಕಲ್ ನೀಡಲಾಗುತ್ತಿತ್ತು.ಬಳಿಕ ಪೋಷಕರ ಒತ್ತಾ ಯದ ಮೇರೆಗೆ ವಿದ್ಯಾರ್ಥಿಗಳಿಗೂ ಸೈಕಲ್ ವಿತರಣೆ ಮಾಡಲು ಆರಂಭಿಸಲಾಯಿತು.ಆದರೆ ಈ ಯೋಜನೆ ಯಿಂದ ಬೆಂಗಳೂರು ಉತ್ತರ, ದಕ್ಷಿಣ ಶೈಕ್ಷಣಿಕ ಜಿಲ್ಲೆಗಳು. ಧಾರವಾಡ,ಕಲಬುರಗಿ,ಬೆಳಗಾವಿ,ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳು ಹೊರಗುಳಿದಿವೆ.ಉಚಿತ ಸೈಕಲ್ ವಿತರಣೆ ಕರ್ನಾಟಕ ಸರ್ಕಾರ ಉಚಿತ ಸೈಕಲ್ ವಿತರಿಸುವ ಯೋಜನೆಯನ್ನು 2006-07ರಲ್ಲಿ ಆರಂಭಿಸಿತು.ದೂರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ,ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಸೇರಿದ ಮತ್ತು ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 8 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಮೊದಲು ಸೈಕಲ್ ವಿತರಿಸಲಾಯಿತು.
ಬಳಿಕ 8ನೇ ತರಗತಿಯ ಎಲ್ಲಾ ಹುಡುಗಿಯರು ಮತ್ತು ಹುಡುಗರಿಗೆ ವಿತರಣೆ ಮಾಡಲು ಆರಂಭಿಸಲಾಯಿತು. ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಲು ಪ್ರೋಹ್ಸಾಹಿಸುವುದು.ಶಾಲೆಗೆ ತಡವಾಗಿ ಬರುವುದನ್ನು ತಪ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಶಾಲೆಗಳಿಗೆ ಹೆಣ್ಣು ಮಕ್ಕಳ ದಾಖಲಾತಿಯನ್ನು ಉತ್ತೇಜಿಸು ವುದು.ಮಕ್ಕಳು ದೂರದಲ್ಲಿರುವ ಶಾಲೆಯನ್ನು ತಲುಪಲು ಅನುಕೂಲ ಮಾಡುವುದು.ಮಕ್ಕಳ ಕಲಿಕೆ ಹಾಗೂ ಉಳಿ ಯುವಿಕೆಯನ್ನು ಉತ್ತಮ ಪಡಿಸುವುದು.ಮಕ್ಕಳ ಆತ್ಮಸ್ಥೈ ರ್ಯವನ್ನು ಹೆಚ್ಚಿಸುವುದು.ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಪ್ರಯಾಣದ ವೇಳೆಯನ್ನು ತಗ್ಗಿಸು ವುದು ಈ ಯೋಜನೆಯ ಉದ್ದೇಶವಾಗಿದೆ.ಕಳೆದ ಎರಡು ವರ್ಷಗಳಿಂದ ಸೈಕಲ್ ವಿತರಣೆ ಮಾಡಿಲ್ಲ.ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಒಂದು ವೇಳೆ ಸೈಕಲ್ ನೀಡಲು ಸಾಧ್ಯವಾಗದಿದ್ದರೆ ಸೈಕಲ್‌ಗೆ ನೀಡುವ ಹಣದಲ್ಲಿ ಬಸ್ ಪಾಸ್ ವ್ಯವಸ್ಥೆ ಮಾಡಿ ಎಂದು ಪೋಷಕರು ಮನವಿ ಮಾಡಿದ್ದಾರೆ.