ಬೆಂಗಳೂರು –
ಈಗಾಗಲೇ ಪ್ರತಿದಿನ ಸರ್ಕಾರಿ ಶಾಲೆಗಳಲ್ಲಿ ರುಚಿ ರುಚಿ ಯಾಗಿ ಮಕ್ಕಳು ಸವಿಯುತ್ತಿರುವ ಬಿಸಿಯೂಟದೊಂದಿಗೆ ರಾಜ್ಯ ಸರ್ಕಾರ ಸಿರಿಧಾನ್ಯಗಳ ಬಿಸಿಯೂಟವನ್ನು ಮಕ್ಕ ಳಿಗೆ ನೀಡಲು ಮುಂದಾಗಿದೆ.ಹೌದು ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು ತಿಂಗಳ ಲ್ಲಿ ಒಂದು ದಿನ ಮಕ್ಕಳಿಗೆ ಸಿರಿಧಾನ್ಯ ಬಿಸಿಯೂಟ ನೀಡ ಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿ ದರು.ಸದನದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು ಕರ್ನಾಟಕ ಹಾಲು ಮಹಾಮಂಡಲ ಸಹಯೋಗದಲ್ಲಿ ತಿಂಗಳಲ್ಲಿ ಒಂದು ದಿನ ರಾಜ್ಯದ ಶಾಲಾ ಮಕ್ಕಳಿಗೆ ಸಿರಿಧಾ ನ್ಯದ ಬಿಸಿಯೂಟ ನೀಡಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಬಜೆಟ್ನಲ್ಲಿ ಈಗಾಗಲೇ 10 ಕೋಟಿ ರೂಪಾ ಯಿನ್ನು ಮೀಸಲಿಡಿಸಲಾಗಿದೆ ಎಂದರು.ಇನ್ನು ರಾಜ್ಯ ಸರ್ಕಾರವು ಸಿರಿಧಾನ್ಯ ಕೃಷಿ ಪ್ರೋತ್ಸಾಹಕ್ಕೆ ಪ್ರೋತ್ಸಾಹಧನ ನೀಡುತ್ತಿದ್ದು ಒಂದು ಹೆಕ್ಟೇರ್ಗೆ ಕನಿಷ್ಠ 10,000 ರೂ.ನಿಂದ 20,000 ರೂ. ಪ್ರೋತ್ಸಾಹಧನ ನೀಡಲಾಗುವುದು. ರಾಜ್ಯದ ನಾಲ್ಕು ಭಾಗದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಿ ರೈತರಿಗೆ ಸಿರಿಧಾನ್ಯ ಕೃಷಿ ಬಗ್ಗೆ ಜಾಗೃತಿ ಹಾಗೂ ಉತ್ತೇಜನ ನೀಡಲಾಗುವುದು ಎಂದರು.