ಬೆಂಗಳೂರು –
ಈವರೆಗೆ ರಾಜ್ಯದ ಅದೆಷ್ಟೋ ಸರ್ಕಾರಿ ಶಾಲೆಗಳಿಗೆ ಇಲ್ಲದ ದಾಖಲೆಗಳನ್ನು ಹಕ್ಕು ಪತ್ರಗಳನ್ನು ಬೆಂಗಳೂರಿನಲ್ಲಿ ವಿತರಣೆ ಮಾಡಲಾಯಿತು.ಹೌದು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಯಾಗಿದ್ದ ಕಂದಾಯ ದಾಖಲೆಗಳ ವಿಚಾರ ಕುರಿತು ಇತ್ತೀಚೆಗಷ್ಟೇ ದೊಡ್ಡ ಚರ್ಚೆಯಾಗಿತ್ತು ಈ ಒಂದು ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಸಚಿವರು ಕಂದಾಯ ದಾಖಲೆ ಗಳನ್ನು ಸಿದ್ದಮಾಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಯನ್ನು ನೀಡಿದ್ದರು ಇದರ ಬೆನ್ನಲ್ಲೇ ಆಯಾ ಸರ್ಕಾರಿ ಶಾಲೆಗಳ ದಾಖಲೆ ಗಳನ್ನು ಸಿದ್ಧಪಡಿಸಿ ವಿತರಣೆ ಮಾಡಲಾಯಿತು

ಹೌದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆಯ 161 ಸರ್ಕಾರಿ ಶಾಲೆಗಳ ಆಸ್ತಿ ದಾಖಲೆಗಳನ್ನು ಶಾಲೆಗಳ ಎಸ್.ಡಿ.ಎಂ.ಸಿಗಳಿಗೆ ವಿತರಣೆ ಮಾಡಲಾಯಿತು


ಕಾರ್ಯಕ್ರಮದಲ್ಲಿ ಶಾಲಾ ದಾಖಲೆ ಗಳನ್ನು ಕಂದಾಯ ಸಚಿವ ಆರ್ ಅಶೋಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಶಾಲಾ ಮುಖ್ಯಸ್ಥರಿಗೆ ವಿತರಣೆ ಮಾಡಿದರು ಇದರೊಂದಿಗೆ ಕಳೆದ ಹಲವಾರು ವರ್ಷಗಳಿಂದ ಶಾಲಾ ದಾಖಲೆಗಳಿಲ್ಲದೆ ಆತಂಕದಲ್ಲಿದ್ದ ಶಾಲೆಗಳಿಗೆ ನೆಮ್ಮದಿ ಸುದ್ದಿ ನೀಡಿದರು