ಬೆಂಗಳೂರು –
ಸಧ್ಯ ರಾಜ್ಯದಲ್ಲಿ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಕುರಿ ತಂತೆ ಬಿಸಿ ಬಿಸಿ ಚರ್ಚೆ ತನಿಖೆಯ ನಡುವೆ ಈಗ ಮತ್ತೊಂದು ನೇಮಕಾತಿಯಲ್ಲಿ ಅಕ್ರಮದ ವಾಸನೆ ಬಂದಿದ್ದು ಈ ಕುರಿತಂತೆ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್ ಠಾಣೆಗೆ ದೂರನ್ನು ನೀಡಿದೆ. ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಗಳು ಲೀಕ್ ಆಗಿದ್ವು ಎಂಬ ಆರೋಪ ಕೇಳಿ ಬಂದಿದೆ. ಪರೀಕ್ಷೆ ಮುನ್ನವೇ ಅಭ್ಯರ್ಥಿಗಳ ಮೊಬೈಲ್ನಲ್ಲಿ ಪ್ರಶ್ನೆಗಳು ಹರಿದಾಡಿವೆ ಎನ್ನಲಾದ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಪಿಎಸ್‌ಐ ಪರೀಕ್ಷಾ ನೇಮಕಾತಿ ಅಕ್ರಮ ಸಿಐಡಿ ತನಿಖೆ ಬೆನ್ನಲ್ಲೇ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಪರೀಕ್ಷೆ ನಡೆಯುವ ಕೆಲವೇ ಗಂಟೆಗಳ ಹಿಂದೆ ವಾಟ್ಸ್ ಆಯಪ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಗುಮಾನಿ ವ್ಯಕ್ತವಾಗಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದೆ.
ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಗಳು ಲೀಕ್ ಆಗಿದ್ವು ಎಂಬ ಆರೋಪ ಕೇಳಿ ಬಂದಿದೆ.ಪರೀಕ್ಷೆ ಮುನ್ನವೇ ಅಭ್ಯರ್ಥಿಗಳ ಮೊಬೈಲ್ನಲ್ಲಿ ಪ್ರಶ್ನೆಗಳು ಹರಿದಾಡಿವೆ ಎನ್ನಲಾದ ಸ್ಕ್ರೀನ್ ಶಾಟ್ ವೈರಲ್ ಆಗಿದೆ. 20ಕ್ಕೂ ಹೆಚ್ಚು ಪ್ರಶ್ನೆಗಳು ಅಭ್ಯರ್ಥಿ ಯೊಬ್ಬನ ಮೊಬೈಲ್ ನಲ್ಲಿ ನೋಡಿದ್ದಾಗಿ ಸ್ಪರ್ಧಾಕಾಂಕ್ಷಿ ಅಭ್ಯರ್ಥಿಗಳು ದೂರು ನೀಡಿದ್ದಾರೆ.
ಕೆಇಎ 1,242 ಅಸಿ ಸ್ಟೆಂಟ್ ಪ್ರೊಫೆಸರ್ ಪೋಸ್ಟ್‌ಗಳಿಗೆ ನೋಟಿಫಿಕೇಷನ್ ಹೊರಡಿಸಿತ್ತು. ಈ ಹಿನ್ನೆಲೆ ಕಳೆದ ತಿಂಗಳು ಮಾರ್ಚ್‌ನಲ್ಲಿ 12 ರಿಂದ 15ರವರೆಗೆ ನಡೆದಿದ್ದ ಪರೀಕ್ಷೆ ಕೂಡ ನಡೆದಿತ್ತು ಆಯಪ್ಷನಲ್ ಸಬ್ಜೆಕ್ಟ್ 125 ಪ್ರಶ್ನೆಗಳಿದ್ದು ಇದಕ್ಕೆ 250 ಮಾರ್ಕ್ಸ್ ಇತ್ತು.ಸಾಮಾನ್ಯ ಜ್ಞಾನ ಪೇಪರ್ 50 ಪ್ರಶ್ನೆ 50 ಅಂಕ ಒಳಗೊಂಡಿತ್ತು. ಪರೀಕ್ಷೆಗೂ ಮೊದಲು ಭೂಗೋಳ ಶಾಸ್ತ್ರದ ಪೇಪರ್ ಲೀಕ್ ಆಗಿರುವ ಬಗ್ಗೆ ದೂರು ದಾಖಲಾ ಗಿದೆ.ಸೌಮ್ಯ ಆರ್ ಎಂಬುವರ ಮೊಬೈಲ್‌ನಿಂದ 18 ಪ್ರಶ್ನೆ ಗಳು ಹರಿದಾಡಿವೆ.ಯಾರಿಗೆಲ್ಲಾ ವಾಟ್ಸ್ ಆಪ್ ನಲ್ಲಿ ಪ್ರಶ್ನೆಗಳು ಹರಿದಾಡಿವೆ ಎಲ್ಲಿಂದ ಪ್ರಶ್ನೆ ಗಳು ಲೀಕ್ ಆಗಿವೆ ಎಂಬ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಲಾಗಿದ್ದು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿದ್ದು ಪೊಲೀಸರು ತನಿಖೆ ಮಾಡತಾ ಇದ್ದಾರೆ.