ಛತ್ತೀಸ್‍ಗಢ –
ಶಾಲೆಯ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಶಾಲಾ ಮುಖ್ಯ ಶಿಕ್ಷಕ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಪರಿಣಾಮ ಶಾಲಾ ಮುಖ್ಯ ಶಿಕ್ಷಕನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.ಛತ್ತೀಸ್‍ಗಢ ದ ಕಂಕೇರ್ ಜಿಲ್ಲೆಯ ಇಂದ್ರಪ್ರಸ್ಥ ಗ್ರಾಮದಲ್ಲಿರುವ ಸರಕಾರಿ ಶಾಲೆ ಯಲ್ಲಿ ಈ ಘಟನೆ ನಡೆದಿದೆ.ಶಾಲೆಯ ಮುಖ್ಯ ಶಿಕ್ಷಕನಿಗೆ ಈಗಾಗಲೇ ಮದುವೆಯಾಗಿದ್ದರೂ ತನ್ನ ಲೈಂಗಿಕ ಅಸೆ ಈಡೆರಿಸಿಕೊಳ್ಳಲು ಶಾಲೆಯಲ್ಲಿದ ಇತರ ಶಿಕ್ಷಕಿಯರನ್ನು ಬಳಸಿಕೊಳ್ಳುತ್ತಿದ್ದ ಅಲ್ಲದೆ ತನ್ನ ಕಾಮಚೇಷ್ಟೆ ನಡೆಸಲು ಶಾಲೆಯ ಕೊಠಡಿಯನ್ನೆ ಬಳಸಿಕೊಳ್ಳುತ್ತಿದ್ದ. ಈ ವಿಚಾರ ಗ್ರಾಮಸ್ಥರ ಕಿವಿಗೂ ಬಿದ್ದಿದೆ.ಇದರಿಂದ ಕೆರಳಿದ ಗ್ರಾಮ ಸ್ಥರು ಶಾಲಾ ಮುಖ್ಯ ಶಿಕ್ಷಕನ ಅಕ್ರಮವನ್ನು ಬಯಲಿಗೆ ಳೆಯಬೇಕೆಂದು ನಿರ್ಧರಿಸಿ ಶಿಕ್ಷಕಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದಾಗ ಗೊತ್ತಾಗದಂತೆ ವಿಡಿಯೋ ಚಿತ್ರೀಕರಿಸಿದ್ದಾರೆ ಬಳಿಕ ಅದನ್ನು ಇಲಾಖೆಯ ಮೇಲಾಧಿಕಾರಿಗಳಿಗೆ ತೋರಿಸಿ ದ್ದಾರೆ.ಜೊತೆಗೆ ಮುಖ್ಯ ಶಿಕ್ಷಕನ ರಾಸಲೀಲೆಯ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿದ್ದಾರೆ.ಅತ್ತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರವಾಗು ತ್ತಿದ್ದಂತೆ ಎಚ್ಚೆತ್ತ ಶಾಲಾ ಅಧಿಕಾರಿಗಳು ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಸದ್ಯ ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಶಾಲಾ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ
ಗ್ರಾಮಸ್ಥರು ವಿಡಿಯೋ ಚಿತ್ರೀಕರಿಸಿದ ವಿಚಾರ ಗೊತ್ತಾಗು ತ್ತಿದ್ದಂತೆ ಮುಖ್ಯ ಶಿಕ್ಷಕ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ಹಣದ ಆಮಿಷವೊಡ್ಡಿರುವ ಸಂಗತಿಯೂ ಬೆಳಕಿಗೆ ಬಂದಿದ್ದು ಸಧ್ಯ ಈ ಒಂದು ಕುರಿತು ತನಿಖೆ ನಡಿತಾ ಇದೆ