ಧಾರವಾಡ –
ನಾಡು ಕಂಡ ಶ್ರೇಷ್ಠ ಹಿಂದೂಸ್ಥಾನಿ ಸಂಗೀತ ಗಾಯಕ ರಲ್ಲಿ ಧಾರವಾಡ ದ ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ ಕೂಡಾ ಒಬ್ಬರಾಗಿದ್ದರು (79) ವಯಸ್ಸು ಆಗಿದ್ದ ಇವರು ನಿಧನರಾಗಿದ್ದಾರೆ.ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ.ಪಂ ಮಲ್ಲಿಕಾ ರ್ಜುನ ಮನಸೂರ ಅವರ ಪುತ್ರ ಡಾ. ರಾಜಶೇಖರ ಮನಸೂರ ಅವರು ಜೈಪುರ ಪತ್ರೋಳಿ ಘರಾಣೆ ಸಂಗೀ ತದ ಮೇರು ಗಾಯಕರಾಗಿದ್ದಾರೆ.ಇಂಗ್ಲಂಡ್‌ನಲ್ಲಿ ಶಿಕ್ಷಣ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾ ಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.
ಇದರೊಂದಿಗೆ ಇನ್ನೂ ಆಲ್ ಇಂಡಿಯಾ ರೇಡಿಯೊದ ಉನ್ನತ ಶ್ರೇಣಿಯ ಕಲಾವಿದರಾಗಿದ್ದ ಇವರು ಬಹಳಷ್ಟು ಪ್ರಮುಖ ವೇದಿಕೆಯಲ್ಲಿ ಕಛೇರಿಯಲ್ಲಿ ಕಾರ್ಯಕ್ರಮ ನೀಡಿದ್ದಾರೆ.ಇವರ ಗಾಯನದ ಧ್ವನಿಮುದ್ರಿಕೆಗಳನ್ನು ಭೋಪಾಲ್‌ನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮನುಕುಲ ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ.ಮೃತರ ಅಂತ್ಯಕ್ರಿಯೆ ಇಂದು ಸಂಜೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು.