ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು ಹೌದು ಸೋಮಪುರ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಧಾರವಾಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿಯಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಭವನ ಹಾಗೂ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಮಾಡಲಾಯಿತು
ಸೋಮಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಯಲ್ಲಿ 2021-22 ನೇ ಸಾಲಿನ ಶೀರ್ಷಿಕೆ 3054 ರಾಜ್ಯ ಹೆದ್ದಾರಿ ನಿರ್ವಹಣೆ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ ಸೂಪಾ ಅಣ್ಣಿಗೇರಿ ರಾಜ್ಯ ಹೆದ್ದಾರಿ 28ರ ಕಿಮೀ 73 ರಿಂದ 84.72 ರವರಿಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ.ತಲವಾಯಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಧಾರವಾಡ ಅವರ ಅನುದಾನದಲ್ಲಿ ಧಾರವಾಡ ತಾಲೂಕಿನ ತಲವಾಯಿ ಆಯಟ್ಟಿ ರಸ್ತೆಯಿಂದ ತಲೆಮೊರಬದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಗೆ ಚಾಲನೆ ನೀಡಲಾಯಿತು
ತಲವಾಯಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿ ಯೋಜನೆಯಡಿಯಲ್ಲಿ ಧಾರವಾಡ ತಾಲೂಕಿನ ಅಮ್ಮಿನಭಾವಿ ಶಿವಳ್ಳಿ ಜಿಲ್ಲಾ ಮುಖ್ಯರಸ್ತೆ ಕೀ ಮಿ 8.20 ರಿಂದ 9.20 ವರೆಗೆ ದುರಸ್ತಿ ಕಾಮಗಾರಿ ಭೂಮಿ ಪೂಜೆ .
ಕವಲಗೆರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಡಿ ಧಾರವಾಡ ತಾಲೂಕಿನ ಕವಲಗೇರಿ ಚಂದನಮಟ್ಟಿ ಜಿಲ್ಲಾ ಮುಖ್ಯ ರಸ್ತೆ ಕೀ ಮೀ 1.90 ರಿಂದ ಕಿ ಮೀ 4.65 ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಗುರುನಾಥ ಗೌಡ ಗೌಡರ,ಭೀಮಣ್ಣ ರಾಮದುಗ೯,ನಾಗಪ್ಪ ತಿಲಾ೯ಪೂರ,ಅಶೋಕ ನಾವಳ್ಳಿ, ಶಿವು ಬೇಳ್ಳಾರದ,ಬಸಣ್ಣ ಭೈರಪ್ಪನವರ,ಹೂವಪ್ಪ ಯಮೋಜಿ,ವಿಶ್ವನಾಥ ಕವಳಿ,ಮಂಜುನಾಥ ಮಾಯ್ಕರ್, ಬಸವರಾಜ ತಂಬಾಕದ,ಸುರೇಶ ಬನ್ನಿಗೀಡದ,ಬಸವರಾಜ ಬಳ್ಳೋಡಿ,ಲಿಂಬಣ್ಣ ನಾಯ್ಕರ,ಬಾಳು ಕುಡೆಕಾರ, ಬಸವ ರಾಜ ಲಕ್ಕಮನವರ,ರುದ್ರಪ್ಪ ವಾಲಿ,ಹನಮಂತ ತುಳಜ ಪ್ಪನವರ,ತಾನಾಜಿ ತುಳಜಪ್ಪನವರ,ರಮೇಶ ದೂಡ್ಮನಿ, ನಿಂಗಪ್ಪ ಅಳಗವಾಡಿ,ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾದ್ಯಕ್ಷರು ಉಪಸ್ತಿತರಿದ್ದರು.