ಕಾಕಿನಾಡ(ಆಂಧ್ರಪ್ರದೇಶ) –
ಕರ್ತವ್ಯನಿರತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೊಬ್ಬರು ಸರ್ವಿಸ್ ರಿವಾಲ್ವಾರ್ ನಿಂದ ಗುಂಡಿಕ್ಕಿಕೊಂಡು ಆತ್ಮಹ ತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕಾಕಿನಾಡ ಜಿಲ್ಲೆಯ ಸರ್ಪಾವರಂನಲ್ಲಿ ನಡೆದಿದೆ. ಸಬ್ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಸರ್ವಿಸ್ ರಿವಾಲ್ವಾರ್ ನಿಂದ ಗುಂಡಿಕ್ಕಿ ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
2014ರಲ್ಲಿ ಎಸ್ಐ ಆಗಿ ಆಯ್ಕೆಯಾಗಿದ್ದ ಇವರು ಸದ್ಯ ಪೂರ್ವ ಗೋದಾವರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2021 ರ ಆಗಸ್ಟ್ ನಿಂದ ಕಾಕಿನಾಡ ಜಿಲ್ಲೆಯ ಸರ್ಪವರಂ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದು ಕುಟುಂಬದೊಂದಿಗೆ ನಾಗಮಲ್ಲಿತೋಟ ಜಂಕ್ಷನ್ ನಲ್ಲಿ ವಾಸವಾಗಿದ್ದರು.ನಿನ್ನೆ ಮುಖ್ಯಮಂತ್ರಿ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿ ವಾಪಸ್ ಆಗಿದ್ದರು.ಬೆಳಗ್ಗೆ 5 ಗಂಟೆಗೆ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹ ತ್ಯೆಗೆ ಶರಣಾಗಿದ್ದಾರೆ.ಈ ವೇಳೆ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತೊಂದು ಕೋಣೆಯಲ್ಲಿ ಮಲಗಿದ್ದರು ಘಟನಾ ಸ್ಥಳಕ್ಕೆ ಎಸ್.ಪಿ.ರವೀಂದ್ರನಾಥ್ ಆಗಮಿಸಿ ಪರಿ ಶೀಲನೆ ನಡೆಸಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ