ಬೆಂಗಳೂರು –
ಪಠ್ಯ ಪುಸ್ತಕ ರಚನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಮೌಲ್ಯಗಳು ನೀತಿಗಳು ಪ್ರಜಾತಾಂತ್ರಿ ಕತೆಗೆ ಪೂರಕವಾಗಿರಬೇಕು.ಈ ನಿಟ್ಟಿನಲ್ಲಿ ಸರಕಾರಗಳು ಬದಲಾದಂತೆ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯ ಪುಸ್ತಕಗಳನ್ನು ಬದಲಾಯಿಸುವ ಈ ಪರಿಪಾಠ ಸರಿಯಲ್ಲ ಎಂದು ಡಾ.ಕೆ.ಮರುಳಸಿದ್ಧಪ್ಪ,ಡಾ.ವಿಜಯಾ,ಡಾ. ರಾಜೇಂದ್ರ ಚೆನ್ನಿ,ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಗಣೇಶ್ ದೇವಿ, ಡಾ.ಬಂಜಗೆರೆ ಜಯಪ್ರಕಾಶ್, ದಿನೇಶ್ ಅಮೀನ್ ಮಟ್ಟು,ಕುಂ.ವೀರಭದ್ರಪ್ಪ, ಕೆ.ಷರೀಫಾ ಪ್ರತಿಭಾ ನಂದಕುಮಾರ್, ಬಿ.ಸುರೇಶ್,ಕಾಳೇಗೌಡ ನಾಗವಾರ,ರಂಜಾನ್ ದರ್ಗಾ,ವಸುಂಧರಾ ಭೂಪತಿ, ಪುರುಷೋತ್ತಮ ಬಿಳಿಮಲೆ, ಎಚ್.ಎಸ್. ರಾಘವೇಂದ್ರ ರಾವ್,ಮಾವಳ್ಳಿ ಶಂಕರ್, ರಹಮತ್ ತರೀಕೆರೆ,ಲಕ್ಷ್ಮೀ ಚಂದ್ರಶೇಖರ್, ಕೇಸರಿ ಹರವೂ, ಕೆ.ಎಸ್.ವಿಮಲಾ ಸೇರಿ ದಂತೆ ನಾಡಿನ ಎಪ್ಪತ್ತೊಂದು ಸಾಹಿತಿಗಳು,ಕಲಾವಿದರು, ಸಾಮಾಜಿಕ ಹೋರಾಟಗಾರರು ಬಹಿರಂಗಪತ್ರವನ್ನು ಬರೆದಿದ್ದಾರೆ.

ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಯು ಸಂಪೂರ್ಣವಾಗಿ ಶಿಕ್ಷಣ ತಜ್ಞರ ಮೂಲಕ ಮಾತ್ರ ನಡೆಯ ಬೇಕು ಎನ್ನುವುದು ಇಲ್ಲಿನ ಪ್ರಜ್ಞಾವಂತರ ಆಶಯವಾಗಿದೆ. ಭಾರತದ ಚುನಾವಣಾ ಆಯೋಗದ ರೀತಿಯಲ್ಲಿ ಈ ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಶೀಲನೆಗೆ ಒಂದು ಸ್ವಾಯತ್ತ ಆಯೋಗ ರಚಿಸಬೇಕು.ಇದು ಸರಕಾರದ ನಿಯಂತ್ರಣದಲ್ಲಿ ಇರಬಾರದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡು ತ್ತಾರೆ.ಯಾವುದೇ ಪೂರ್ವಾಲೋಚನೆ ಇಲ್ಲದೇ ಶಿಕ್ಷಣ ತಜ್ಞರು ವಿಷಯ ತಜ್ಞರುಗಳ ಜೊತೆ ಹಿಂದಿನ ಪರಿಷ್ಕರಣಾ ಸಮಿತಿಯ ಅಧ್ಯಕ್ಷರ ಜೊತೆ ಸಮಾಲೋಚಿಸದೆ ತನ್ನ ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಅಧ್ಯಕ್ಷರ ನ್ನಾಗಿ ನೇಮಿಸಿ ಅವರ ಮೂಲಕ ಪಠ್ಯಪುಸ್ತಕಗಳ ಬದಲಾ ವಣೆಗೆ ಮುಂದಾಗಿರುವುದು ನಮ್ಮ ಆತಂಕಕ್ಕೆ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.
ಸಂವಿಧಾನದ ಆಶಯಗಳ ಅನುಸಾರ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು’ ರೂಪಿಸಿದ ಮಾರ್ಗಸೂಚಿಗಳಿಗೆ ಅನು ಗುಣವಾಗಿ ಪಠ್ಯಕ್ರಮ ರೂಪಿಸಬೇಕು.ಪಠ್ಯಗಳನ್ನು ಆಯ್ಕೆ ಮಾಡುವಾಗ ಲಿಂಗತ್ವ ಅಸಮಾನತೆ,ಪ್ರಾದೇಶಿಕ ಅಸಮಾ ನತೆಯನ್ನು ತಪ್ಪಿಸಬೇಕು.ಸಾಮಾಜಿಕ ನ್ಯಾಯದ ತತ್ವ ಪಾಲನೆಯಾಗಬೇಕು.ತರಗತಿಗಳ ಮಕ್ಕಳ ವಯೋಮಾನ ವನ್ನು ಆಧರಿಸಿ ಪಠ್ಯಗಳನ್ನು ಆಯ್ಕೆ ಮಾಡಬೇಕು.ಅದನ್ನು ಬಿಟ್ಟು,ಮಕ್ಕಳ ಮೇಲೆ ಯಾವುದೇ ರಾಜಕೀಯ,ಧಾರ್ಮಿಕ ಸಿದ್ಧಾಂತಗಳನ್ನು ಹೇರುವ ಪಠ್ಯಗಳನ್ನು ಆಯ್ಕೆ ಮಾಡಬಾ ರದು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಲವು ಪಠ್ಯಗಳನ್ನು ಕೈ ಬಿಟ್ಟಿರುವ ಕುರಿತು ಶಿಕ್ಷಣ ಸಚಿವ ರಿಂದ ಉತ್ತರವೇ ಬರುತ್ತಿಲ್ಲ.ಹಾಗಾಗಿ ಅದು ಪೂರ್ವಗ್ರಹ ಪೀಡಿತವಾಗಿದೆ ಎಂದು ಹೇಳಬೇಕಿದೆ.ಇನ್ನು ಆರ್‍ಎಸ್ ಎಸ್‍ನ ಹಿಂದುತ್ವ ಸಿದ್ಧಾಂತವನ್ನು ರೂಪಿಸಿದ ಹೆಡಗೇವಾರ್ ಅವರ ಭಾಷಣವನ್ನು ಸೇರಿಸುವ ಔಚಿತ್ಯವೇನು ಎಂಬು ದಕ್ಕೆ ಯಾವುದೇ ಸ್ಪಷ್ಟೀಕರಣವಿಲ್ಲ.ಬದಲಿಗೆ ಹೆಡಗೇವಾರ್ ಭಾಷಣ ಸೇರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ಈ ವಿಷಯದಲ್ಲಿ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲದಿರುವುದು ಪ್ರಶ್ನಾರ್ಹವಾಗಿದೆ. ಹಾಗೆಯೇ ಪಠ್ಯ ಪುಸ್ತಕಗಳ ಮುದ್ರ ಣವೇ ಆಗಿಲ್ಲ ಇವೆಲ್ಲ ವದಂತಿ ಎಂದು ನಿರಾಕರಿಸಿದ್ದಾರೆ ಎಂದೂ ವರದಿಗಳಿವೆ.ನಿಯಮದಂತೆ ಮೇ 25 ರೊಳಗೆ ಪಠ್ಯ ಪುಸ್ತಕ ಪೂರೈಕೆ ಆಗಬೇಕು.ಆದರೆ ಇನ್ನೂ ವಿವಾದ ವನ್ನೇ ಇಟ್ಟುಕೊಂಡಿರುವ ಸರಕಾರ ಪುಸ್ತಕ ಪೂರೈಸಬ ಹುದೇ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ