ಬೆಂಗಳೂರು –
ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ರಾಜ್ಯಾಧ್ಯಂತ ಆರಂಭ ಗೊಂಡಿದ್ದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಆರಂಭವಾಗಿದೆ.ಶಿಕ್ಷಕರಾಗಿ ಬಯಸುವ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಆಯಾ ಜಿಲ್ಲೆಗಳಲ್ಲಿ ಅದೇ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.ಇನ್ನೂ ಪರೀಕ್ಷೆ ಆರಂಭಕ್ಕೂ ಒಂದು ತಾಸು ಮೊದಲೇ ಪರೀಕ್ಷಾ ಕೇಂದ್ರದ ಬಳಿ ಅಭ್ಯರ್ಥಿಗಳು ಹಾಜರಿದ್ದರು. ಪರೀಕ್ಷಾರ್ಥಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಯಿತು.ಪರೀಕ್ಷಾ ಅಕ್ರಮಗಳು ನಡೆಯದಂತೆ ತಡೆ ಯಲು ರಾಜ್ಯದ ಎಲ್ಲಾ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.ಅಲ್ಲದೇ ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್ ವ್ಯಾಪ್ತಿಯೊಳಗೆ ನಿಷೇಧಾಜ್ಞೆಯನ್ನು ಜಾರಿಗೊಳಿ ಸಲಾಗಿದ್ದು ಪರೀಕ್ಷಾರ್ಥಿಗಳಿಗೆ ಮೊಬೈಲ್,ಕ್ಯಾಲ್ಯೂಕ್ಲೀಟರ್, ಎಲೆಕ್ಟ್ರಾನಿಕ್ಸ್ ವಾಚ್,ಮೈಕ್ರೋ ಫೋನ್,ಬ್ಲೂ ಟೂತ್ ಹಾಗೂ ಇತರೆ ಎಲ್ಲಾ ಎಲೆಕ್ಟ್ರಾನಿಕ ಉಪಕರಣಗಳನ್ನು ತರುವುದು ನಿಷೇಧಿಸಲಾಗಿದೆ.
ಪರೀಕ್ಷಾರ್ಥಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿದ ಬಳಿಕ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತಿದೆ.ಅಲ್ಲದೇ ಯಾವುದೇ ರೀತಿಯಾದ ಕೈ ಗಡಿಯಾರಗಳಿಗೆ ಅನುಮತಿ ನೀಡಿಲ್ಲ.ಪ್ರತಿ ಕೊಠಡಿಯಲ್ಲೂ ಸಮಯ ಪಾಲನೆಗಾಗಿ ಗೋಡೆ ಗಡಿಯಾರಗಳನ್ನು ಅಳವಡಿಸಲಾಗಿದೆ.ಜಾಮಿಟಿ ಬಾಕ್ಸ್ ಇದ್ದಲ್ಲಿ ಕಡ್ಡಾಯವಾಗಿ ತಪಾಸಣೆಗೊಳಪಡಿಸಿ, ರೇಖಾ ಗಣಿತ ಪರಿಕರಗಳನ್ನು ಮಾತ್ರ ಅನುಮತಿ ನೀಡಲಾ ಗಿದೆ.ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್,ಸೈಬರ್ ಕೆಫೆ, ಕೋಚಿಂಗ್ ಕೇಂದ್ರಗಳ ಬಾಗಿಲು ಮುಚ್ಚಿಸಲಾಗಿದೆ.ಪರೀಕ್ಷಾ ಕೇಂದ್ರಗಳ ಎದುರು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಒಟ್ಟಾರೆ ಪಿಎಸ್ ಐ ಪರೀಕ್ಷೆಯ ಅಕ್ರಮದ ಬೆನ್ನಲ್ಲೇ ಇದರಿಂ ದಾಗಿ ಎಚ್ಚೇತ್ತುಕೊಂಡಿರುವ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಈ ಒಂದು ಪರೀಕ್ಷೆಯನ್ನು ಸಾಕಷ್ಟು ಪ್ರಮಾಣದಲ್ಲಿ ಗಂಭೀರವಾಗಿ ತಗೆದುಕೊಂಡು ಕಟ್ಟು ನಿಟ್ಟಾಗಿ ನಡೆಸುತ್ತಿದೆ.