ದೆಹಲಿ –
ತಂದೆ ಮತ್ತು ಮಗ ರೈಲು ಪ್ರಯಾಣದಲ್ಲಿ ಭೇಟಿಯಾದರೆ ಹೇಗಿರುತ್ತದೆ ಅರೇ ಇದರಲ್ಲೇನು ವಿಶೇಷ ಎಂದು ಪ್ರಶ್ನಿಸ ಬೇಡಿ.ರೈಲಿನಲ್ಲಿ ಟಿಕೆಟ್ ಪರೀಕ್ಷಕರಾಗಿ ಕೆಲಸ (ಟಿಟಿಇ) ಮಾಡುತ್ತಿರುವ ಮಗ ಮತ್ತು ಗಾರ್ಡ್ ಆಗಿ ಕೆಲಸ ಮಾಡು ತ್ತಿರುವ ತಂದೆ ರೈಲು ನಿಲ್ದಾಣವೊಂದರಲ್ಲಿ 2 ಪ್ರತ್ಯೇಕ ರೈಲುಗಳಲ್ಲಿ ಎದುರು ಬದುರಾಗಿ ಬಂದ ಸಂದರ್ಭದಲ್ಲಿ ಮಗ ಸೆಲ್ಫಿ ತೆಗೆದುಕೊಂಡಿದ್ದಾರೆ.ಇಬ್ಬರೂ ಕೂಡ ತಮ್ಮ ತಮ್ಮ ಸಮವಸ್ತ್ರದಲ್ಲಿದ್ದರು ಎನ್ನುವುದು ಗಮನಾರ್ಹ ವಾಗಿದ್ದು ತಂದೆ ಮಗನ ಪೊಟೊ ವೊಂದು ಈಗ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ
ಇಬ್ಬರು ಖುಷಿಯಾಗಿ ಸಂಚರಿಸುತ್ತಿರುವ ರೈಲಿನಲ್ಲೇ ಭೇಟಿ ಯಾಗುವ ಸಂದರ್ಭದ ಫೋಟೋ ಈಗ ವೈರಲ್ ಆಗಿದೆ. ಇದೊಂದು ಅತ್ಯುತ್ತಮ ಸೆಲ್ಫಿ.ತಂದೆ ಮತ್ತು ಮಗ ಕೆಲಸ ಮಾಡುತ್ತಿರುವ ರೈಲುಗಳೆರಡು ಎದುರು ಬದುರಾಗಿ ಸಂಚ ರಿಸಿದಾಗ ತೆಗೆದಿರುವ ಫೋಟೋ ಅದ್ಭುತ ಟ್ವೀಟಿಗರೊ ಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಫೋಟೋ 30 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಮತ್ತು 2 ಸಾವಿರಕ್ಕೂ ಅಧಿಕ ಟ್ವೀಟ್‌ಗಳನ್ನು ಕಂಡಿದೆ.