ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು – ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ…

Suddi Sante Desk
ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು – ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ…

ನವಲಗುಂದ –

ಯುವ ನ್ಯಾಯವಾದಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಗಿರುವ  ಅರುಣ್ ಕುಮಾರ್ ಮಜ್ಜಗಿ ಯವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ದಂತೆ ಈ ಬಾರಿಗೂ ವಿಶೇಷ ವಾಗಿ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡಲು ಅವರ ಗೆಳೆಯರ ಬಳಗವು ಮುಂದಾಗಿದ್ದು ಈ ಒಂದು ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಹತ್ತು ಹಲವಾರು ಸಮಾಜ ಮುಖಿಯಾದ ಕಾರ್ಯಕ್ರಮ ಗಳನ್ನು ಆಚರಣೆ ಮಾಡಲಾಗುತ್ತಿದೆ

 

ಆಗಸ್ಟ್ 1 ರಂದು ನವಲಗುಂದ ಪಟ್ಟಣದ ಅಪ್ಪಾಜಿ ಗಾರ್ಡನ್ ನಲ್ಲಿ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮ ವನ್ನು ಅರುಣ್ ಕುಮಾರ್ ಮಜ್ಜಿಗಿ ಅವರ ಅಭಿಮಾನಿ ಬಳಗದಿಂದ ಅದ್ದೂರಿ ಯಾದ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗಿದೆ

 

ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ ಪಟ್ಟಣ ಆಗಸ್ಟ್ 1ರಂದು ವಿವಿಧ ಸೇವಾ ಚಟುವ ಟಿಕೆಗಳ ಆಯೋಜನೆ ಮಾಡಲಾಗಿದೆ.

ತಂದೆಯಂತೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ತಮ್ಮ ಹುಟ್ಟು ಹಬ್ಬವನ್ನು ತುಂಬಾ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಈ ಒಂದು ಕಾರ್ಯಕ್ರಮ ದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪ್ರಮುಖ ವಾಗಿ ನವಲಗುಂದ ತಾಲ್ಲೂಕಿನಲ್ಲಿ SSLC, PUC ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಇದರೊಂದಿಗೆ ಹಲವಾರು ಗ್ರಾಮಗಳ ವಿದ್ಯಾರ್ಥಿ ಗಳಿಗೆ ನೋಟ್ ಬುಕ್ ವಿತರಣೆ ಪೆನ್ ವಿತರಣೆ ಮಾಡಲಾಗುತ್ತದೆ

ಈ ಒಂದು ಅರ್ಥಪೂರ್ಣ ಕಾರ್ಯಕ್ರಮ ದಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರು ಕ್ಷೇತ್ರದ ಶಾಸಕರು ಆಪ್ತರು ಸೇರಿದಂತೆ ಹಲವಾರು ಗಣ್ಯರು ಮಠಾಧೀಶರು ಪಾಲ್ಗೊಂಡು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

 

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.