ಧಾರವಾಡ –
ಧಾರವಾಡದಲ್ಲಿ ಮತ್ತೆ ನೆತ್ತರು ಹರಿದ್ದಿದ್ದು ಪ್ರೇಯಸಿಗೆ ತಲ್ವಾರ್ ಇರಿದು ಕೊಲೆಗೆ ಯತ್ನ ನಡೆದಿದೆ.ವಿಜಯ ಕದಮನಿಂದ ಈ ಒಂದು ಕೊಲೆಗೆ ಯತ್ನ ನಡೆದಿದ್ದು ತಲ್ವಾರ್ ಇರಿತಕ್ಕೊಳಗಾದ ಪದ್ಮಾಳನ್ನು ಸಧ್ಯ ಹೆಚ್ಚಿನ ಚಿಕಿತ್ಸೆಗಾಗಿ ಪೊಲೀಸರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಪದ್ಮಾ.ಇನ್ನೂ ಸುದ್ದಿ ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮಾಹಿತಿ ಪಡೆದು ಕೊಂಡಿದ್ದಾರೆ.ನಗರದ ಸೋನಾಪುರದಲ್ಲಿ ಈ ಒಂದು ಘಟನೆ ನಡೆದಿದ್ದು ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ಆಗಾಗ ನಡೆಯುತ್ತಿತ್ತು ವಿಜಯ ರಾಮ ಸೇನಾ ಧಾರವಾಡ ಜಿಲ್ಲೆಯ ಜಿಲ್ಲಾಧ್ಯಕ್ಷನಾಗಿದ್ದು ಕಳೆದ 7 ವರ್ಷಗಳಿಂದ ಆಕೆಯ ಜೊತೆ ಸಂಸಾರ ನಡೆಸಿದ್ದನಂತೆ.
ಪದ್ಮಾ ಎಂಬಾಕೆಗೆ ತಲವಾರ್ ನಿಂದ ಇರಿದಿರುವ ವಿಜಯ ಕದಂ ಪದ್ಮಾ ಎಂಬಾಕೆಯ ಜೊತೆ ಆಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದನಂತೆ ವಿಜಯ.ಪ್ರೇಯಸಿಗೆ ಇರಿದು ಉಪನಗರ ಠಾಣೆಗೆ ಶರಣಾಗಿದ್ದಾನೆ ವಿಜಯ.
ಇದಕ್ಕೂ ಮುನ್ನ ಇಬ್ಬರ ನಡುವೆ ಜಗಳ ಆಗಿದ್ದು ಕೈಯಲ್ಲಿ ಪದ್ಮಾ ಚಾಕು ಹಿಡಿದುಕೊಂಡಿದ್ದು ಸ್ಥಳದಿಂದ ಹೋಗಿದ್ದ ವಿಜಯ್ ತಲ್ವಾರ್ ತಗೆದುಕೊಂಡು ಬಂದಿದ್ದನು ಇತ್ತ ತಲ್ವಾರ್ ನಿಂದ ಅಟ್ಯಾಕ್ ನಿಂದ ಇರಿದು ಕೊಲೆ ಮಾಡಲು ಯತ್ನವನ್ನು ಮಾಡಿದ್ದಾನೆ.
ತಲ್ವಾರ್ ಇರಿತಕ್ಕೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಸದ್ಯ ವಿಜಯ್ ನನ್ನು ವಶಕ್ಕೆ ತಗೆದು ಕೊಂಡಿರುವ ಪೊಲೀಸರು ಮುಂದಿನ ವಿಚಾರಣೆಯನ್ನು ಮಾಡ್ತಾ ಇದ್ದಾರೆ.