ಬೆಂಗಳೂರು –
‘7ನೇ ವೇತನ ಆಯೋಗ ಜಾರಿಯಾದರೆ ಡಿ. ದರ್ಜೆಯಿಂದ ಪ್ರಥಮ ದರ್ಜೆ ನೌಕರರವರೆಗೆ ₹ 25,000ದಿಂದ ₹ 50,000 ವೇತನ ಹೆಚ್ಚಳ ಆಗಲಿದೆ.ಇನ್ನೂ ಈ ಹಿಂದೆಲ್ಲ ವೇತನ ಆಯೋಗ ರಚನೆಗೆ ದೊಡ್ಡ ಹೋರಾಟ ಮಾಡಬೇ ಕಾಗಿತ್ತು.ಈಗ ಯಾವುದೇ ಪ್ರತಿಭಟನೆ ಮುಷ್ಕರ ಇಲ್ಲದೆ ವೇತನ ಆಯೋಗ ರಚನೆ ಮಾಡುತ್ತಿರುವುದಕ್ಕೆ ನೌಕರರ ಸಂಘಟ ನೆಯೇ ಕಾರಣ ಎಂದರು.ಹಾಸನದ ಹೊಳಲ್ಕೆರೆ ಪಟ್ಟಣ ದಲ್ಲಿ ಸರ್ಕಾರಿ ನೌಕರರ ಭವನದ ಶಂಕುಸ್ಥಾಪನೆ ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯಾಗಾರದಲ್ಲಿ ಪಾಲ ಅವರು ಮಾತನಾಡಿದರು.ಹಿಂದೆ 7 ವರ್ಷಗಳ ನಂತರ ಹೊಸ ವೇತನ ಆಯೋಗ ರಚನೆ ಮಾಡಲಾತ್ತಿತ್ತು. ಈಗ 6ನೇ ವೇತನ ಆಯೋಗ ಜಾರಿಯಾದ 5ನೇ ವರ್ಷಕ್ಕೆ 7ನೇ ವೇತನ ಆಯೋಗ ರಚಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ನಾನು ಅಧ್ಯಕ್ಷನಾದ ಮೇಲೆ ಅನೇಕ ಬೇಡಿಕೆಗಳನ್ನು ಈಡೇ ರಿಸಿದ್ದೇನೆ.ಹಬ್ಬದ ಮುಂಗಡವನ್ನೂ ₹10,000ದಿಂದ
₹ 25,000ಕ್ಕೆ ಹೆಚ್ಚಿಸಲಾಗಿದೆ.ಈಗ ನಗದು ರಹಿತ ಚಿಕಿತ್ಸೆ ಯೋಜನೆ ಜಾರಿಯಾಗಲಿದ್ದು 6 ಲಕ್ಷ ನೌಕರರಿಗೆ ಹಾಗೂ ಅವರ 40 ಲಕ್ಷ ಅವಲಂಬಿತರಿಗೆ ₹ 1 ಕೋಟಿ ವೆಚ್ಚದವ ರೆಗಿನ ಚಿಕಿತ್ಸಾ ಸೌಲಭ್ಯಗಳು ಉಚಿತವಾಗಿ ಸಿಗಲಿವೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನೌಕರರ 15 ಬೇಡಿಕೆಗಳನ್ನು ಈಡೇರಿಸಿದರು.ಕೋವಿಡ್ ಸಂಕಷ್ಟದಲ್ಲೂ ನೌಕರರ ವೇತನ ಹಿಡಿಯಲಿಲ್ಲ ಎಂದು ಹೇಳಿದರು.
ಹಿಂದೆಲ್ಲಾ ನೌಕರರು ವೇತನ ಹೆಚ್ಚಳ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಬೀದಿಗೆ ಇಳಿದು ಹೋರಾಟ ಮಾಡುವ ಅನಿವಾರ್ಯತೆ ಇತ್ತು.ಷಡಾಕ್ಷರಿ ಅವರು ಅಧ್ಯಕ್ಷರಾದ ಮೇಲೆ ಯಾವುದೇ ಮುಷ್ಕರ ಇಲ್ಲದೆ ಸೌಲಭ್ಯ ಗಳು ಸಿಗುತ್ತಿವೆ.7ನೇ ವೇತನ ಆಯೋಗದ ರಚನೆ ಹಾಗೂ ಶಿಫಾರಸು ಜಾರಿಗೆ ಬೆಂಬಲ ನೀಡುತ್ತೇನೆ.ಪಟ್ಟಣದಲ್ಲಿ ₹ 1 ಕೋಟಿ ಅನುದಾನದಲ್ಲಿ ಸರ್ಕಾರಿ ನೌಕರ ಭವನ ನಿರ್ಮಿಸ ಲಾಗುವುದು ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್, ಪುರಸಭೆ ಅಧ್ಯಕ್ಷ ಅಶೋಕ್,ಉಪಾಧ್ಯಕ್ಷ ಕೆ.ಸಿ.ರಮೇಶ್, ಪದಾಧಿಕಾರಿಗಳಾದ ಬಿ.ಎಚ್.ವೆಂಕಟೇಶಯ್ಯ, ಮಲ್ಲಿಕಾ ರ್ಜುನ ಬಳ್ಳಾರಿ,ಮೋಹನ್ ಕುಮಾರ್,ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಂಜುನಾಥ್,ಡಯಟ್ ಉಪನಿರ್ದೇಶಕ ಎಸ್.ಕೆ.ಬಿ.ಪ್ರಸಾದ್,ಡಿಡಿಪಿಯು ಎನ್.ರಾಜು, ತಹಶೀ ಲ್ದಾರ್ ರಮೇಶಾಚಾರಿ,ಇಒ ಗಂಗಣ್ಣ,ಬಿಇಒ ತಿಪ್ಪೇಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವಾಸಿಂ,ಎನ್.ಶಿವಮೂರ್ತಿ, ತಿಪ್ಪೇಶಪ್ಪ,ಅಣ್ಣಪ್ಪ,ಎ.ಜಯಪ್ಪ, ಜಗನ್ನಾಥ್,ಎಸ್ ಈರಣ್ಣ, ಈಶ್ವರಪ್ಪ,ಶಿವಕುಮಾರ್,ಆರ್.ಲಕ್ಷ್ಮಯ್ಯ,ಪದಾಧಿಕಾರಿ ಗಳು ಇದ್ದರು.