ಬೆಂಗಳೂರು –
ಬಿಜೆಪಿಯ ಚುನಾವಣಾ ಸಮಿತಿ ಮತ್ತು ಸಂಸದೀಯ ಮಂಡಳಿಗೆ ಸದಸ್ಯರಾಗಿ ನೇಮಕಗೊಂಡಿರುವ ನಿಕಟ ಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಂಗಳೂರಿನಲ್ಲಿ ಭೇಟಿ ಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಪ್ರಹ್ಲಾದ್ ಜೋಶಿ ಯವರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಇನ್ನೂ ಇದೇ ವೇಳೆ ಕೆಲವೊತ್ತುಗಳ ಕಾಲ ಕುಳಿತುಕೊಂಡು ಚರ್ಚೆಯನ್ನು ಮಾಡಿ ಪಕ್ಷದ ಮತ್ತು ಪ್ರಸ್ತುತ ವಿಚಾರಗಳು ಕುರಿತಂತೆ ಔಪಚಾರಿಕವಾಗಿ ಮಾತನಾಡಿದರು.ಹಿರಿಯ ಹಾಗು ಅನುಭವಿ ನಾಯಕರ ಮಾರ್ಗದರ್ಶನ ಪಕ್ಷದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಅಭಿಪ್ರಾ ಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಅಭಿಪ್ರಾಯಪಟ್ಟರು.























