ಕುಂದಾಪುರ –
ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಅಕ್ಷರ ದಾಸೋಹ ಸಿಬ್ಬಂದಿಗೆ ಕೆಲಸವೆಲ್ಲ ಬಿಟ್ಟು ರಾಜಧಾನಿ ಬೆಂಗಳೂರಿಗೆ ತೆರಳಿ ಧರಣಿ ಕುಳಿತರೂ ವೇತನ ಮಾತ್ರ ಇನ್ನೂ ಪಾವತಿಯಾಗಿಲ್ಲ.5 ತಿಂಗಳಿನಿಂದ ಬಿಸಿಯೂಟ ನೌಕರರಿಗೆ ವೇತನ (ಗೌರವ ಧನ)ವೇ ಆಗಿಲ್ಲ.
ಅದನ್ನೇ ನಂಬಿಕೊಂಡಿರುವ ರಾಜ್ಯದ 118 ಲಕ್ಷ ಅಕ್ಷರ ದಾಸೋಹ ಸಿಬ್ಬಂದಿ ಈಗ ದೊಡ್ಡ ಸಂಕಷ್ಟವನ್ನು ಅನು ಭವಿಸುವಂತಾಗಿದೆ.ಈ ಶೈಕ್ಷಣಿಕ ವರ್ಷ ಮೇ 16ರಿಂದ ಆರಂಭಗೊಂಡಿದ್ದರೂ ಅಕ್ಷರ ದಾಸೋಹ ಸಿಬ್ಬಂದಿಯು ಕಳೆದ ಎಪ್ರಿಲ್‌ನಲ್ಲಿ 10 ದಿನ ಕೆಲಸ ನಿರ್ವಹಿಸಿದ್ದರು. ಮೇ ನಲ್ಲಿ 15 -16 ದಿನ,ಜೂನ್,ಜುಲೈಯಲ್ಲಿ ಕರ್ತವ್ಯ ನಿರ್ವಹಿ ಸಿದ್ದಾರೆ.ಆಗಸ್ಟ್ ಸಹ ಮುಗಿಯುವ ಹಂತದಲ್ಲಿದೆ.ಆದರೆ ಶಾಲಾರಂಭವಾದಾಗಿನಿಂದ ಈವರೆಗೆ ಬಿಸಿಯೂಟ ನೌಕರರಿಗೆ ಸರಕಾರ ಸಂಬಳವೇ ನೀಡಿಲ್ಲ.ಇನ್ನು ರಾಜ್ಯದಲ್ಲಿ 47,250 ಮಂದಿ ಅಡುಗೆ ತಯಾರಕರು ಹಾಗೂ 71,336 ಮಂದಿ ಅಡುಗೆ ಸಹಾಯಕರು ಸೇರಿ ಒಟ್ಟು 1,18,586 ಮಂದಿ ಅಕ್ಷರ ದಾಸೋಹ ಸಿಬಂದಿಯಿದ್ದಾರೆ. ಈ ಪೈಕಿ ಹೊಸ ಆದೇಶದಂತೆ ಈ ಶೈಕ್ಷಣಿಕ ಸಾಲಿನಿಂದ ಅಡುಗೆ ತಯಾರಕರಿಗೆ ಮಾಸಿಕ 3,700 ರೂ.ಹಾಗೂ ಸಹಾಯ ಕರಿಗೆ ಮಾಸಿಕ 3,600 ರೂ. ಗೌರವ ಧನವನ್ನು ಸರಕಾರ ನೀಡಲಾಗುತ್ತಿದೆ.
ಬಿಸಿಯೂಟ ನೌಕರರ ಖಾತೆಗೆ ನೇರವಾಗಿ ಹಣ ಹಾಕುವಂ ತಹ (ಡಿಬಿಟಿ- ಡೈರೆಕ್ಟ್ ಬೆನಿಫಿಶಿಯರಿ ಟ್ರಾನ್ಸ್‌ಫರ್) ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಅದಕ್ಕೆ ಸಂಬಂಧಿಸಿದಂತೆ ಎಲ್ಲರ ಆಧಾರ್ ಸಹಿತ ದಾಖಲೆ ಜೋಡಣೆ ಪ್ರಕ್ರಿಯೆ ನಡೆ ಯುತ್ತಿದೆ. ಈ ಕಾರಣಕ್ಕೆ ವಿಳಂಬವಾಗಿದೆ. ಶೀಘ್ರ ಖಾತೆಗೆ ಗೌರವ ಧನ ಜಮೆಯಾಗಲಿದೆ.ಮೇ ತಿಂಗಳ ಪಾವತಿ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.ಬಾಕಿಯದ್ದು ಪಾವತಿ ಯಾಗಲಿದೆ ಎಂದು ನಾರಾಯಣ ಗೌಡ ಜಂಟಿ ನಿರ್ದೇ ಶಕರು ಮಧ್ಯಾಹ್ನದ ಬಿಸಿಯೂಟ ಯೋಜನೆ ಬೆಂಗಳೂರು ಇವರು ಹೇಳಿದ್ದಾರೆ.