ಬೆಂಗಳೂರು –
ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿ ಗಳು ಸಮರ ಮುಂದುವರೆಸಿದ್ದಾರೆ.ಬೆಂಗಳೂರು ಕಂದಾಯ ಭವನ ಕಚೇರಿಯಲ್ಲಿ ಲಂಚ ಪಡೆದುಕೊಳ್ಳು ವಾಗ ವಿಶೇಷ ಶಿರಸ್ತೇದಾರ್ ರೆಡ್ ಹ್ಯಾಂಡ್ ಆಗಿ ಲೋಕಾ ಗೆ ಸಿಕ್ಕಿಬಿದ್ದಿದ್ದಾರೆ.
ಕಂದಾಯ ಭವನ ಕಚೇರಿಯಲ್ಲಿ ವಿಶೇಷ ಶಿರಸ್ತೇದಾರ್ ಆಗಿರುವ ಶ್ರೀಕಾಂತ್ ಲೋಕಾಯುಕ್ತ ಬಲೆಗೆ ಬಿದ್ದವರಾ ಗಿದ್ದಾರೆ.
ದೂರುದಾರದಿಂದ 45 ಸಾವಿರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಬಿಡಿಎಗೆ ಸಲ್ಲಿಸಲು ನೈಜತಾ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯಿಂದ ಶಿರಸ್ತೇದಾರ್ 13 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು.45 ಸಾವಿರ ರೂ ಲಂಚ ಸ್ವೀಕರಿಸುತ್ತಿ ದ್ದರು ಎಂದು ತಿಳಿದು ಬಂದಿದೆ.