ಧಾರವಾಡ –
ಧಾರವಾಡದ ಸಂಚಾರಿ ಪೊಲೀಸ್ ಠಾಣೆ ಎದುರಿನ ಪಾರ್ಕಿಂಗ್ ನಲ್ಲಿ ಇಂಡಿಕಾ ಕಾರವೊಂದನ್ನು ನಿಲ್ಲಿಸಲಾಗಿತ್ತು. ಪಾರ್ಕ್ ಮಾಡಿ ಬೇರೆ ಕಡೆಗೆ ಹೋಗಿದ್ದರು. ನಿಲ್ಲಿಸಲಾಗಿದ್ದ ಇಂಡಿಕಾ ಕಾರು ಏಕಾಏಕಿಯಾಗಿ ಹಿಂದೆ ಹೊರಟಿತು.
ಒಂದು ಕಡೆ ಮಾರುಕಟ್ಟೆ ಪ್ರದೇಶ ಸಾಕಷ್ಟು ಪ್ರಮಾಣದಲ್ಲಿ ವಾಹನಗಳು ಓಡಾಡುತ್ತವೆ ಮತ್ತೊಂದು ಕಡೆ ಸಾರ್ವಜನಿಕರ ಸಂಚಾರ ಹೀಗಾಗಿ ಕಾರು ಹಿಂಬದಿಯಾಗಿ ಜೋರಾಗಿ ಹೊರಟಿತು. ಸ್ಥಳದಲ್ಲೇ ಇದ್ದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳಾದ ಗಿರೀಶ್ ಬಿದರಳ್ಳಿ , ಎಸ್ ಕೆ ಯರಗಂಬಳಿಮಠ ಕಾರನ್ನು ತಡೆಹಿಡಿದರು.
ಇಬ್ಬರು ಸಿಬ್ಬಂದಿ ಗಳು ಹಿಂದೆ ಹೋಗುತ್ತಿದ್ದ ಕಾರನ್ನು ತಡೆಹಿಡಿದು ದೊಡ್ಡ ಪ್ರಮಾಣದಲ್ಲಿನ ಅನಾಹುತವನ್ನು ತಪ್ಪಿಸಿದರು.ಕೂಡಲೇ ಈ ಇಬ್ಬರು ಸಿಬ್ಬಂದಿ ಗಳು ಕಾರನ್ನು ತಡೆಹಿಡಿದು ನಿಲ್ಲಿಸಿ ಮಾರುಕಟ್ಟೆ ಪ್ರದೇಶದಲ್ಲಿ ನಡೆಯುತ್ತಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದರು.
ನಂತರ ಸಾರ್ವಜನಿಕರ ಸಹಾಯದೊಂದಿಗೆ ಕಾರನ್ನು ಮುಂದೆ ತಳ್ಳಿ ನಿಲ್ಲಿಸಿದರು. ಇದರೊಂದಿಗೆ ಸಂಚಾರಿ ಪೊಲೀಸ್ ಠಾಣೆ ಮುಂದೆ ಅದರಲ್ಲೂ ಸಾರ್ವಜನಿಕ ಮಾರುಕಟ್ಟೆ ಪ್ರದೇಶದಲ್ಲಿ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಅನಾಹುತವನ್ನು ತಪ್ಪಿಸಿದರು ಇವರು.
ಕರ್ತವ್ಯದ ನಡುವೆಯೂ ದೊಡ್ಡ ಪ್ರಮಾಣದ ದುರಂತವೊಂದನ್ನು ತಪ್ಪಿಸಿದ ಧಾರವಾಡ ಸಂಚಾರಿ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ನಂತರ ಬಂದ ಕಾರಿನ ಚಾಲಕನಿಗೆ ಸಂಚಾರಿ ಪೊಲೀಸರು ಸರಿಯಾಗಿ ಬುದ್ದಿ ಹೇಳಿ ದಾಖಲೆಗಳನ್ನು ಪರಿಶೀಲನೆ ಮಾಡಿ ಕಳಿಸಿದರು. ಇನ್ನೂ ಇಂಡಿಕಾ ಕಾರಿನ ಮೇಲೆ ಕರ್ನಾಟಕ ಸರ್ಕಾರದ ಸೇವೆಯಲ್ಲಿ ಅಂತಾ ಬರೆದಿದೆ.
ಬೈಲಹೊಂಗಲ ಆರೋಗ್ಯ ಇಲಾಖೆಗೆ ಬಾಡಿಗೆ ರೂಪದಲ್ಲಿ ಈ ಒಂದು ಕಾರನ್ನು ಅಧಿಕಾರಿಗಳು ಬಳಸುತ್ತಿದ್ದು ಅಲ್ಲಿಂದ ಸರ್ಕಾರದ ಸೇವೆಯಲ್ಲಿ ಅಂತಾ ಬರೆದುಕೊಂಡು ಹೀಗೆ ಯಾಕೇ ಈ ಒಂದು ಕಾರು ಬಂದಿದೆ ಕರ್ನಾಟಕ ಸರ್ಕಾರದ ಸೇವೆಯಲ್ಲಿ ಅಂತಾ ಕರೆದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಿನ ಚಾಲಕನ ಮತ್ತು ಇಲಾಖೆಯ ಅಧಿಕಾರಿಗಳು ಉತ್ತರಿಸಬೇಕು. ಒಟ್ಟಾರೆ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದ್ದು ಸಂಚಾರಿ ಪೊಲೀಸರಿಗೆ ಒಂದು ಹ್ಯಾಟ್ಸ್ ಅಪ್.