ನ್ಯೂಯಾರ್ಕ್ –
ಹೌದು ದೀಪಾವಳಿ ಹಬ್ಬಕ್ಕಾಗಿ ಅಮೇರಿಕಾದಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾ ಗಿದೆ.ರಜೆ ನೀಡುವಂತೆ ಅಲ್ಲಿನ ಭಾರತೀಯರು ಸೇರಿದಂತೆ ಹಲವರು ಒತ್ತಾಯವನ್ನುಮಾಡಿದ್ದರು ಈ ಒಂದು ವಿಚಾರ ಕುರಿತಂತೆ ಮೇಯರ್ ಅವರು ಸಾರ್ವತ್ರಿಕ ರಜಾ ದಿನವೆಂದು ಘೋಷಣೆ ಮಾಡಿ ದ್ದಾರೆ.
ಇನ್ನೂ ಮುಂದಿನ ವರ್ಷ ಅಂದರೆ 2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವ ಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದ್ದು ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.ಜಗತ್ತಿನಾದ್ಯಂತ ಇರುವ ಭಾರತೀಯರು ಈ ಹಬ್ಬವನ್ನು ಆಚರಿಸು ತ್ತಾರೆ ಆದರೆ ಹೆಚ್ಚು ಭಾರತೀಯರು ಇರುವ ಅಮೆರಿಕದಲ್ಲಿ ದೀಪಾವಳಿಗೆ ಸಾರ್ವಜನಿಕ ರಜೆ ಇರಲಿಲ್ಲ ರಜೆ ನೀಡಬೇಕೆಂಬ ಜನಪ್ರತಿನಿಧಿಗಳ ವಾದಕ್ಕೆ ಈಗ ಮನ್ನಣೆ ಸಿಕ್ಕಿದೆನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಮತ್ತು ನ್ಯೂಯಾರ್ಕ್ ಸಿಟಿ ಸ್ಕೂಲ್ಸ್ ಚಾನ್ಸೆಲರ್ ಡೇವಿಡ್ ಬ್ಯಾಂಕ್ಸ್ ಜೊತೆಗೂಡಿದ ಆಡಮ್ಸ್ ಈ ವಿಷಯ ತಿಳಿಸಿದ್ದಾರೆ.
ಇನ್ನೂ ಈ ಕುರಿತು ಈ ಹಿಂದೆ ನ್ಯೂಯಾರ್ಕ್‌ನ ಕಾಂಗ್ರೆಸ್ ಸದಸ್ಯೆ ಕೆರೋಲಿನ್ ಬಿ. ಮೆಲೋನಿ ನೇತೃತ್ವದ ಜನಪ್ರತಿನಿಧಿಗಳ ನಿಯೋಗ ರಜೆ ಕುರಿತ ವಿಧೇಯಕ ಮಂಡಿಸಿತ್ತು. ಐತಿಹಾಸಿಕ ವಿಧೇಯಕಕ್ಕೆ ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು.