ಬೆಂಗಳೂರು –
ಹೌದು ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ,ಏಕಾಗ್ರತೆ,ಆರೋಗ್ಯ ವೃದ್ದಿಯೊಂದಿಗೆ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆ ಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದ್ದು ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಸ್ಪಂದನೆ ಒಳ್ಳೆಯ ಹವ್ಯಾಸ ಬೆಳೆಸಿ ಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾ ಗುತ್ತದೆ
ಈಗಾಗಲೇ ಈ ಒಂದು ಕಾರ್ಯವನ್ನು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಧ್ಯಾನವನ್ನುಮಾಡಿಸಲಾಗುತ್ತಿದ್ದು ಈ ಒಂದು ಹಿನ್ಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷ ಕಾಲ ಧ್ಯಾನ ವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಯವರು ಒತ್ತಾಯವನ್ನು ಮಾಡಿ ಶಿಕ್ಷಣ ಸಚಿವ ರಿಗೆ ಪತ್ರವನ್ನು ಬರೆದಿದ್ದರು
ಈ ಒಂದು ಪತ್ರಕ್ಕೆ ಸ್ಪಂದಿಸಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಸೂಚನೆ ನೀಡಿ ಪತ್ರವನ್ನು ಬರೆದಿದ್ದಾರೆ ಈಗಾಗಲೇ ಶಾಲೆಗಳಲ್ಲಿ ಕಲಿಕೆ ಗಿಂತ ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆಗಳು ಹೆಚ್ಚಾಗಿದ್ದು ಇದೇನು ಒಳ್ಳೇಯ ಕೆಲಸ ಆದರೆ ಈಗಾಗಲೇ ಹತ್ತು ಹಲವಾರು ಕೆಲಸ ಕಾರ್ಯಗ ಳಿಂದ ಬಿಡುವಿಲ್ಲದೇ ಬ್ಯೂಜಿಯಾಗಿರುವ ಶಿಕ್ಷಕ ರಿಗೆ ಇದೊಂದು ಹೊಸ ಕಾರ್ಯ ಮತ್ತಷ್ಟು ಒತ್ತಡವನ್ನು ತರಲಿದೆ