ಚಿಕ್ಕಮಗಳೂರು –
ಲಂಚವನ್ನು ತಗೆದುಕೊಳ್ಳುವಾಗ ಎನ್.ಆರ್ ಪುರ ಸಿಪಿಐ ವಸಂತ ಲೋಕಾಯಕ್ತ ಬಲೆಗೆ ಬಿದ್ದಿದ್ದಾರೆ ಹೌದು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ಇವರು ಲಾರಿಯಲ್ಲಿ ಸಾಗಣೆ ಮಿತಿಗಿಂತ ಹೆಚ್ಚು ಸಿಮೆಂಟ್ ಒಯ್ಯುವುದಕ್ಕೆ ಅನುಮತಿ ನೀಡಲು ₹ 10 ಸಾವಿರ ಲಂಚ ಪಡೆಯುವಾಗ ಎನ್.ಎರ್.ಪುರ ಪೊಲೀಸ್ ಇನ್ಸ್ಪೆಕ್ಟರ್ ವಸಂತ ಶಂಕರ್ ಭಾಗವತ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರು ಬೆಳಿಗ್ಗೆ ಕಾರ್ಯಾ ಚರಣೆ ನಡೆಸಿ ಆರೋಪಿ ಮತ್ತು ಲಂಚದ ಹಣ ವನ್ನು ವಶಕ್ಕೆ ಪಡೆದಿದ್ದಾರೆ.ಸಿಪಿಐ ವಸಂತ ಶಂಕರ್ ಭಾಗವತ್ ಅವರು ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಎನ್.ಆರ್. ಪುರದ ಬಸ್ತಿಮಠದ ಸಿಮೆಂಟ್ ಮತ್ತು ಟೈಲ್ಸ್ ವ್ಯಾಪಾರಿ ಎಸ್.ಕೆ.ಮಸ್ತಾನ್ ವಲಿ ಅವರು ಚಿಕ್ಕಮಗಳೂರಿನ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇನ್ಸ್ಪೆಕ್ಟರ್ ವಸಂತ ಅವರು ಈಚೆಗೆ ಸಿಮೆಂಟ್ ಲಾರಿ ತಡೆದಿದ್ದರು ಲಾರಿಯಲ್ಲಿ ಮಿತಿಗಿಂತ ಹೆಚ್ಚು ಲೋಡ್ ಇದೆ ಎಂದು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು ಹೀಗಾಗಿ ಲೋಕಾಯುಕ್ತ ಬಲೆಗೆ ಹಣದ ಸಮೇತ ವಾಗಿ ಬಿದ್ದಿದ್ದಾರೆ ಇನ್ಸ್ಪೆಕರ್ ವಸಂತ 10 ಸಾವಿರ ರೂಪಾಯಿ ಲಂಚ ತಗೆದುಕೊಳ್ಳುವಾಗ ಟ್ರ್ಯಾಪ್ ಮಾಡಲಾಗಿದೆ.
ಚಕ್ರವರ್ತಿ ಜೊತೆ ಮಂಜುನಾಥ ಸುದ್ದಿ ಸಂತೆ ನ್ಯೂಸ್