ಬೆಂಗಳೂರು –
ರಾಜ್ಯದ ಕೆಲವೆಡೆ ಕಂಡು ಬರುತ್ತಿರುವ ಕೇಳಿ ಬರುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಳನ್ನು ಸರ್ಕಾರ ಇಲಾಖೆ ಗಂಭೀರವಾಗಿ ಪರಿಗಣಿಸಿ ಈಗ ಹೊಸದೊಂದು ಆದೇಶ ವನ್ನು ಹೊರಡಿಸಿದೆ.ಹೌದು ರಾಜ್ಯದ ಪ್ರತಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸುವಂತೆ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿ ಸಿದೆ.
ಹೌದು ರಾಜ್ಯದ ಎಲ್ಲ ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಸಮರ್ಪಕ ಅನಷ್ಠಾನಗೊಳಿಸಲು ಮಾರ್ಗಸೂಚಿ ಬಿಡುಗಡೆ ಮಾಡಿ ಹೊಸದೊಂದು ಆದೇಶವನ್ನು ಹೊರಡಿಸಿದೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಸಾರ್ವನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮಕ್ಕಳ ಸುರಕ್ಷತಾ ಸಮಿತಿಯಲ್ಲಿ ಶಾಲಾ ಮುಖ್ಯ ಸ್ಥರು, ಶಾಲೆಯ ಆಡಳಿತ ಮಂಡಳಿ ಈ ಸಮಿತಿ ಅಧ್ಯಕ್ಷರಾಗಿದ್ದು,ಕನಿಷ್ಟ ಇಬ್ಬರು ಶಿಕ್ಷಕರು, ಮೂವರು ಪೋಷಕರು, ಎಸ್ ಡಿಎಂಸಿ ಅಧ್ಯಕ್ಷರು ಇಬ್ಬರು ಮಕ್ಕಳು, ಒಬ್ಬರು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇರಬೇಕು ಎಂದು ತಿಳಿಸಿದೆ.
ಅಲ್ಲದೇ ಪ್ರತಿ ಶಾಲೆಯಲ್ಲೂ ಮಕ್ಕಳ ಸಹಾಯ ವಾಣಿ ಸಂಖ್ಯೆ 1098 ಮತ್ತು ಇತ್ತೀಚಿಗೆ ಬಿಡುಗಡೆ ಮಾಡಿರುವ 14499 ಟೋಲ್ ಫ್ರೀ ಸಂಖ್ಯೆ ಬರೆ ಸುವುದು. ಎಲ್ಲ ಶಾಲೆಗಳಲ್ಲಿ ದೂರು ಮತ್ತು ಸಲಹಾ ಪೆಟ್ಟಿಗೆಯನ್ನು ಸ್ಥಾಪಿಸುವುದು.ಶಾಲಾ ಅವಧಿ ಹಾಗೂ ತರಗತಿವಾರು ವೇಳಾಪಟ್ಟಿ ಮತ್ತು ಅನುಮೋದಿತ ವಿಶೇಷ ತರಗತಿಗಳ ವೇಳಾಪಟ್ಟಿ ಯನ್ನು ಪೋಷಕರಿಗೆ ನೀಡಬೇಕು ಎಂದು ತಿಳಿಸಿದೆ.

ಸುದ್ದಿ ಸಂತೆ ನ್ಯೂಸ್…..