ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸಿಡಿದೆದ್ದಿದ್ದಾರೆ.ಹೌದು ಈವರೆಗೆ ಸರ್ಕಾರಿ ನೌಕರರ ಧ್ವನಿಯಾಗಿ ಕೆಲಸ ವನ್ನು ಮಾಡುತ್ತಿರುವ ಷಡಾಕ್ಷರಿ ಅವರ ಬಗ್ಗೆ ತುಂಬಾ ಮೆಚ್ಚುಗೆಯನ್ನು ಅಭಿಮಾನವನ್ನು ಇಟ್ಟುಕೊಂಡಿದ್ದ ರಾಜ್ಯದ ಸರ್ಕಾರಿ ನೌಕರರು ಈಗ ಸಂಘಟನೆಯ ರಾಜ್ಯಾಧ್ಯಕ್ಷರ ವಿರುದ್ದವೇ ತಿರುಗಿ ಬಿದ್ದಿದ್ದಾರೆ.
ಹೊಸ ಪಿಂಚಣಿ ಯೋಜನೆ ವಿಚಾರದಲ್ಲಿ ಮತ್ತು ಹೋರಾಟಗಾರರು ವಿರುದ್ದ ರಾಜ್ಯಾಧ್ಯಕ್ಷರು ತೋರಿಸುವ ಮೃದು ಧೋರಣೆ ತೋರುತ್ತಿದ್ದಾರೆ ಹಾಗೇ ಹಗುರವಾಗಿ ಮಾತನಾಡುತ್ತಿದ್ದಾರೆಂದು ಈಗ ಅವರ ವಿರುದ್ದವೇ ಸಿಡಿದೆದ್ದಿದ್ದಾರೆ.ನಿಮ್ಮ ಪ್ರತಿಯೊಂದು ವಿಚಾರದಲ್ಲೂ ಸಮಸ್ತ ರಾಜ್ಯದ ಸರ್ಕಾರಿ ನೌಕರರು ನಿಂತುಕೊಂಡಿದ್ದೇವೆ ಬೆಂಬಲವನ್ನು ನೀಡಿದ್ದೇವೆ.
ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ರಾಜ್ಯದ ಸರ್ಕಾರಿ ನೌಕರರ ತಂಟೆಗೆ ನೀವು ಬರಬೇಡಿ ನಮಗೂ ಎಲ್ಲಾ ವಿಚಾರಗಳು ಗೊತ್ತಿವೆ ಏನು ಬಂದ್ ಮಾಡಬೇಕು ಎಲ್ಲವೂ ಗೊತ್ತಿದೆ ಹೀಗಾಗಿ ಈಗ ನೀವು ಹೊಸ ಪಿಂಚಣಿ ವಿಚಾರದಲ್ಲಿ ಯಾಕೇ ಹೀಗೆ ಮಾಡುತ್ತಿದ್ದಿರಿ ಹೋರಾಟದ ದಿಕ್ಕನ್ನು ಯಾಕೇ ತಪ್ಪಿಸುತ್ತಿದ್ದೀರಾ ಹೋರಾಟ ಗಾರರು ಎಂದರೇ ನಿಮಗೆ ಅಷ್ಟೊಂದು ಕೀಳರಿಮೆ ಯಾಕೇ ಹೀಗೆ ಎನ್ನುತ್ತಾ ಇನ್ನೂ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಬಹಿರಂಗವಾಗಿ ಮಾತನಾ ಡಿದ್ದಾರೆ
ಅಲ್ಲದೇ ಪ್ರಶ್ನೆಯನ್ನು ಮಾಡಿದ್ದಾರೆ.ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರು ರಾಜ್ಯಾಧ್ಯಕ್ಷರ ವಿರುದ್ದೇ ತಮ್ಮ ಅಸಮಾಧಾನವನ್ನು ತೋರಿಸಿ ಕೊಂಡಿದ್ದು ಈ ಒಂದು ಬಹಿರಂಗ ಅಸಮಾಧಾನ ಕೋಪ ಆಕ್ರೋಶ ಹೆಚ್ಚಾಗುವ ಮುನ್ನ ರಾಜ್ಯದ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷರು ಎಚ್ಚೇತ್ತುಕೊಂಡು ಸ್ಪಂದಿಸೊದು ಅವಶ್ಯಕವಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..