ಧಾರವಾಡ –
ಭೂಗತ ಪಾತಕಿ ಬಚ್ಚಾಖಾನ್ ನನ್ನು ಧಾರವಾಡ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ. ಮೈಸೂರು ಕಾರಾಗೃಹದಲ್ಲಿದ್ದ ಬಚ್ಚಾಖಾನ್ ನನ್ನು ಧಾರವಾಡಗೆ ಕರೆತರಲಾಗಿದೆ. ಧಾರವಾಡ ಉಪನಗರ ಠಾಣೆ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.
ಮೈಸೂರು ಜೈಲಿನಲ್ಲಿದ್ದುಕೊಂಡೇ ಧಾರವಾಡದ ಅನೇಕರಿಗೆ ಬೆದರಿಕೆ ಹಾಕುತ್ತಿದ್ದನಂತೆ. ತನ್ನ ಬಂಟರ ಮೂಲಕ ಧಮ್ಕಿ ಹಾಕಿಸಿ ಹಫ್ತಾ ವಸೂಲಿಗಿಳಿದಿದ್ದನಂತೆ ಬಚ್ಚಖಾನ್, ಫ್ರೂಟ್ ಇರ್ಫಾನ್ ಸಾವಿನ ಬಳಿಕ ಹುಬ್ಬಳ್ಳಿ-ಧಾರವಾಡ ಮೇಲೆ ಹಿಡಿತ ಸಾಧಿಸಲು ಮುಂದಾಗಿರೋ ಬಚ್ಚಾಖಾನ್ ನನ್ನು ಉಪನಗರ ಠಾಣೆ ವ್ಯಾಪ್ತಿಯಲ್ಲಿ ಅನೇಕ ಉದ್ಯಮಿಗಳಿಗೆ ಬೆದರಿಕೆ ಪೆಟ್ರೋಲ್ ಬಂಕ್ ಮಾಲೀಕರು ಸೇರಿ ಅನೇಕರಿಗೆ ಬಚ್ಚಾಖಾನ್ ಬಂಟರಿಂದ ಧಮ್ಕಿ ನಡೆದಿದ್ದಂತೆ. ಈ ಹಿನ್ನೆಲೆ ಬಚ್ಚಾಖಾನ್ ವಶಕ್ಕೆ ಪಡೆದ ಉಪನಗರ ಠಾಣೆ ಪೊಲೀಸರು ಬಚ್ಚಾಖಾನ್‌ನ ಮೂವರು ಬಂಟರನ್ನೂ ಈಗಾಗಲೇ ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ಬಿಡುವಿಲ್ಲದೇ ಇನಸ್ಪೇಕ್ಟರ್ ಪ್ರಮೋದ್ ಯಲಿಗಾರ ಪಿಎಸೈ ಶ್ರೀಮಂತ ಹುಣಸಿಕಟ್ಟಿ ಮತ್ತು ಉಪನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಿಬ್ಬಂದಿಗಳು ಶಹರ ಪೊಲೀಸ್ ಠಾಣೆ ಇನಸ್ಪೇಕ್ಟರ್ ಶ್ರೀಧರ ಸತಾರೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಕೊನೆಗೂ ಬಚ್ಚಾಖಾನ್ ನನ್ನು ಬಂಧಿಸಿದ್ದಾರೆ.
ಈಗಾಗಲೇ ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ತಮ್ಮ ವಶಕ್ಕೆ ಪಡೆಯಲಿದ್ದಾರೆ. ವಶಕ್ಕೆ ಪಡೆದುಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ಸಾಧ್ಯತೆ