ಸಂಕಲ್ಪ ಸಮಾವೇಶದಲ್ಲಿ ನಿದ್ರೆಗೆ ಜಾರಿದ ಸಿದ್ದರಾಮಯ್ಯ – ವೇದಿಕೆಯ ಮೇಲೆ ಡಿಕೆಶಿ ಮಾತು ಇತ್ತ ಸಿದ್ದು ನಿದ್ದೆ

Suddi Sante Desk

ಹುಬ್ಬಳ್ಳಿ…

ಹುಬ್ಬಳ್ಳಿಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೇಸ್ ಪಕ್ಷದ ಸಂಕಲ್ಪ ಸಮಾವೇಶ ನಡೆಯುತ್ತಿದೆ. ಈ ಒಂದು ಸಂಕಲ್ಪ ಸಮಾವೇಶದಲ್ಲಿ ಕಾಂಗ್ರೇಸ್ ಪಕ್ಷದ ಎಲ್ಲಾ ನಾಯಕರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದಾರೆ.

ನಗರದ ಗೋಕುಲ ರಸ್ತೆಯಲ್ಲಿರುವ ಲೋಟಸ್ ಹೊಟೇಲ್ ನಲ್ಲಿ ಈ ಒಂದು ಸಮಾವೇಶ ನಡೆಯುತ್ತಿದ್ದು ವೇದಿಕೆಯ ಮೇಲೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿ ಮಾತನಾಡುತ್ತಿದ್ದರೆ ಇತ್ತ ಸಂಕಲ್ಪ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದು ಕಂಡು ಬಂದಿತು.

ವೇದಿಕೆ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡುತ್ತಿದ್ದರೆ ಇತ್ತ ಡಿಕೆಶಿ ಭಾಷಣದ ವೇಳೆ ಸಿದ್ದರಾಮಯ್ಯ ಅವರು ನಿದ್ದೆಗೆ ಜಾರಿದ್ದು ಕಂಡು ಬಂದಿತು.

ಹುಬ್ಬಳ್ಳಿಯ ಖಾಸಗಿ‌ ಹೊಟೇಲ್ ನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಡಿಕೆ ಶಿವಕುಮಾರ ಮಾತನಾಡುತ್ತಿದ್ದರೂ ವೇದಿಕೆಯ ಮೇಲೆ ಸಿದ್ದರಾಮಯ್ಯನವರು ಸಖತ್ ನಿದ್ದೇ ಮಾಡುತ್ತಿರುವ ಚಿತ್ರಣ ಕಂಡು ಬಂದಿತು.

ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶ ಕಾರ್ಯಕ್ರಮವಾಗಿದ್ದು ವೇದಿಕೆಯ ಮೇಲೆ ಸಿದ್ದು ನಿದ್ದೆಗೆ ಜಾರಿದ್ದನ್ನು ನೋಡಿ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಮುಜುಗರವನ್ನು ಪಟ್ಟುಕೊಂಡರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.