ಚಾಮರಾಜನಗರ –
ವ್ಯಾಪಾರಿಯೊಬ್ಬರಿಂದ 2.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಕುಮಾರ್ ಮತ್ತು ಗುಂಡ್ಲುಪೇಟೆ ತಾಲೂಕು ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಸತೀಶ್ ಎಂಬುವರಾಗಿದ್ದಾರೆ
ಇಲಾಖೆಗೆ ಕೃಷಿ ಪರಿಕರಗಳನ್ನು ಪೂರೈಸಿದ ಎಸ್‌ಆರ್ ಟ್ರೇಡರ್ಸ್ ಮಾಲೀಕ ಕುಮಾರ ಸ್ವಾಮಿ ಎಂಬುವರು ನೀಡಿದ ದೂರಿನ ಹಿನ್ನಲೆಯಲ್ಲಿ ವರ್ತಕರ ಬಿಲ್ ಮಂಜೂರು ಮಾಡಲು ಇಬ್ಬರೂ ಅಧಿಕಾರಿಗಳು 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
50 ರಷ್ಟು ಸಬ್ಸಿಡಿ ಅಡಿಯಲ್ಲಿ ಫಲಾನುಭವಿಗಳಿಗೆ ಉಪಕರಣಗಳನ್ನು ವಿತರಿಸಲು ಇಲಾಖೆಯು ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಸ್ಥಳೀಯ ವ್ಯಾಪಾರಿಗಳಿಂದ ಉಪಕರಣಗಳನ್ನು ಖರೀದಿಸುತ್ತದೆ
ಅಧಿಕಾರಿಗಳು ಫಲಾನುಭವಿಗಳ 25 ಲಕ್ಷ ರೂಪಾಯಿ ಮೊತ್ತದ 7-8 ಬಿಲ್‌ಗಳನ್ನು ಇಟ್ಟು ಕೊಂಡು ಬಾಕಿ ಇರುವ ಬಿಲ್‌ಗಳನ್ನು ಪಾಸ್ ಮಾಡಲು ವ್ಯಾಪಾರಿಗಳಿಂದ ಲಂಚ ಕೇಳಿದ್ದಾರೆ. ಈ ಸಂಬಂಧ ಎಸ್ ಆರ್ ಟ್ರೇಡರ್ಸ್ ಮಾಲೀಕ ಕುಮಾರಸ್ವಾಮಿ ಅವರು ಕೃಷಿ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕರು 1.5 ಲಕ್ಷ ಹಾಗೂ 1 ಲಕ್ಷ ಲಂಚ ಕೇಳುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುತ್ತಿದ್ದ ನೌಕರರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಗುಂಡ್ಲುಪೇಟೆಯ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಯನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..