ಕುಂದಗೋಳ –
ಗುಡೇನಕಟ್ಟಿ ಗ್ರಾಮ ಪಂಚಾಯತನ ಅಲ್ಲಾಪೂರ ಪೂರ್ಣ ಗ್ರಾಮದಿಂದ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪತ್ರಕರ್ತ ಮಲ್ಲಿಕಾರ್ಜುನ ರಡ್ಡೇರ ಗೆಲುವು ಸಾಧಿಸಿದ್ದಾರೆ.

ಮೊದಲ ಬಾರಿಗೆ ಸ್ಪರ್ಧೆಯಾಗಿ ಸ್ಪರ್ಧೆ ಮಾಡಿದ್ದ ಮಲ್ಲಿಕಾರ್ಜುನ 327 ಮತಗಳನ್ನು ಪಡೆದು ಪ್ರತಿಸ್ಪರ್ಧಿ ವಿರುದ್ದ ಗೆಲುವನ್ನು ಸಾಧಿಸಿದ್ದಾರೆ.

ಈಗಾಗಲೇ ಒಮ್ಮೇ ಈ ಹಿಂದೆ ಸೋತಿದ್ದ ಇವರು ಸಧ್ಯ ಮತ್ತೊಮ್ಮೆ ಸ್ಪರ್ಧೆ ಮಾಡಿದ್ದರು. ಒಂದು ಕಡೆ ವೃತ್ತಿಯಲ್ಲಿ ಪತ್ರಕರ್ತ ಮತ್ತೊಂದು ಕಡೆ ಏನಾದರು ಗ್ರಾಮದಲ್ಲಿ ಅಭಿವೃದ್ದಿ ಮಾಡಬೇಕು ಎಂದುಕೊಂಡು ಗ್ರಾಮದ ಯುವಕರನ್ನು ಬೆನ್ನಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದ ಹಗಲು ರಾತ್ರಿ ಎನ್ನದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಮಲ್ಲಿಕಾರ್ಜುನ ರಡ್ಡೆರ ಗೆ ಕೊನೆಗೂ ಅಲ್ಲಾಪೂರ ಗ್ರಾಮಸ್ಥರು ಗೆಲುವಿನ ಮಾಲೆ ಹಾಕಿದ್ದಾರೆ.

ಗೆಲುವು ಸಾಧಿಸಿದ್ದು ಮತ್ತಷ್ಟು ಹೊಸ ಹೊಸ ಕನಸು ಅಭಿವೃದ್ದಿಯ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಲು ಗೆಲುವು ನನಗೆ ಮೆಟ್ಟಿಲಾಗಿದೆ ಎಂದು ಮಲ್ಲಿಕಾರ್ಜನ ರಡ್ಡೇರ ಹೇಳಿದ್ದಾರೆ. ಇದೇ ವೇಳೆ ಗೆಲುವಿಗೆ ಮತ್ತು ಚುನಾವಣೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.