ಮುಂಬೈ –
ಕಿವಿಸ್ ಕಿವಿ ಹಿಂಡಿ ಪೈನಲ್ ಗೆ ಲಗ್ಗೆ ಇಟ್ಟ ಭಾರತ ತಂಡ – ಸೆಮಿಫೈನಲ್ ಪಂದ್ಯವನ್ನು ಗೆಲ್ಲಿಸಿದ ಸೆಮಿಗೆ ಸಾಥ್ ನೀಡಿದ ಟೀಮ್ ನ ಆಟಗಾರರು
ಹೌದು ನಿರೀಕ್ಷೆಯಂತೆ ವಿಶ್ವಕಪ್ ನ ಮೊದಲ ಸೆಮಿಪೈನಲ್ ಪಂಧ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪೈನಲ್ ಗೆ ಎಂಟ್ರಿ ಕೊಟ್ಟಿದೆ.ಮುಂಬೈನ ವಾಂಖೆಡೆ ಮೈದಾನ ದಲ್ಲಿ ನಡೆದ ಪಂಧ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್ ನ್ನು ಆಯ್ಕೆ ಮಾಡಿಕೊಂಡು
ನಿಗದಿತ 50 ಓವರ್ ಗಳಲ್ಲಿ 397 ರನ್ ಗಳನ್ನು ಗಳಿಸಿತು.ಪ್ರಮುಖವಾಗಿ ಇಂದಿನ ಮೊದಲ ಸೆಮಿಪೈನಲ್ ಪಂಧ್ಯದಲ್ಲಿ ಒಂದು ಹಂತದಲ್ಲಿ ಭಾರತ ತಂಡವು ಸೋಲಿನ ದಾರಿಯಲ್ಲಿ ನಡೆ ದಿತ್ತು ಬೌಲರ್ ಗಳ ಭರ್ಜರಿ ಬೌಲಿಂಗ್ ನಿಂದಾಗಿ ಸೋಲಿನ ದವಡೆಯಿಂದ ಪಾರಾಗಿ ಗೆಲುವಿನ ನಗೆಯನ್ನು ಬೀರಿತು 2023ರ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಗೆದ್ದು ಬೀಗಿತು.
ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತಕ್ಕೆ ಗೆಲುವು ಸಿಕ್ಕಿದೆ. ಆದ್ರೆ ಭಾರತ ತಂಡ ಕಿವೀಸ್ ವಿರುದ್ಧ ಈ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ಜೊತೆಗೆ ಸೋಲಿನ ಪಾಠ ಕೂಡ ಕಲಿತಿದೆ ಎಲ್ಲಾ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡದ ಆಟಗಾರರಿಗೆ ಅತಿಯಾದ ಆತ್ಮವಿಶ್ವಾ ಸವು ಒಳ್ಳೆಯದಲ್ಲ ಎಂಬ ಪಾಠವನ್ನು ನ್ಯೂಜಿಲೆಂಡ್ ಆಟಗಾರರು ಒಂದು ಹಂತದಲ್ಲಿ ಆಡಿದ ಆಟದಿಂದಾಗಿ ಕಂಡು ಬಂದಿತು
ಹೌದು ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಅವರ ಶತಕದ ನೆರವಿನಿಂದ ಭಾರತ ತಂಡ ಇಂದು ಒಟ್ಟು 397 ರನ್ ಗಳಿಸಿತ್ತು. ಈ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶವನ್ನು ಮಾಡಿತು
ನಂತರ ಬ್ಯಾಟಿಂಗ್ ಆರಂಭ ಮಾಡಿದ ನ್ಯೂಜಿಲೆಂಡ್ ತಂಡವು 30 ರನ್‌ಗೆ ಮೊದಲ ವಿಕೆಟ್ ಮತ್ತು 39 ರನ್‌ಗೆ ತನ್ನ 2ನೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ನಂತರ ತಂಡಕ್ಕೆ ಆಸರೆಯಾಗಿದ್ದು ನಂತರ ಬಂದ ಆಟಗಾರರು ಅಲರ್ಟ್ ಆಗಿ ಆಟವಾಡಿ ಭಾರತದ ಬೌಲರ್ ಗಳನ್ನು ಮನಬಂದಂತೆ ಸಿಕ್ಸ್ ಪೋರ್ ಗಳನ್ನು ಚಚ್ಚಿದರು
ಹೀಗೆ ನ್ಯೂಜಿಲೆಂಡ್ ತಂಡಕ್ಕೆ ಸಂಕಷ್ಟ ಸಮಯಕ್ಕೆ ವಿಲಿಯಮ್ಸನ್ ಮತ್ತು ಮಿಚೆಲ್ ಸಾಥ್ ಕೊಟ್ಟರು ಇಬ್ಬರ ಜೋಡಿ ಬೇರೆಯಾಗಿದ್ದು 220 ರನ್‌ಗೆ ಅಷ್ಟೊತ್ತಿಗೆ ಭಾರತ ತಂಡದ ಆಟಗಾರರಿಗೂ ಸೋಲಿನ ಭಯ ಆವರಿಸಿತ್ತು ಭಾರತಕ್ಕೆ ಇಂದು ನೆರವಾಗಿದ್ದು ಬೃಹತ್ ಮೊತ್ತದ ರನ್ ಅಕಸ್ಮಾತ್ ಭಾರತ ಟೀಂ ಇಂದು 350 ರನ್ ಒಳಗೆ ನ್ಯೂಜಿ ಲೆಂಡ್‌ಗೆ ಗುರಿ ನೀಡಿದ್ದರೆ ಸೋಲು ಖಚಿತ ಎನ್ನ ಬಹುದಿತ್ತು.
398 ರನ್‌ಗಳ ಬೃಹತ್ ಗುರಿ ನೀಡಿದ್ದರೂ ನ್ಯೂಜಿಲೆಂಡ್ ತಂಡವು ಹೆದರಲೇ ಇಲ್ಲ. ಬದಲಾಗಿ ಭಾರತಕ್ಕೆ ಪಂದ್ಯದ ಅಂತ್ಯದ ತನಕವೂ ಕಾಡಿತ್ತು ಅದರಲ್ಲಿ, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಅವರ ಭರ್ಜರಿ 181 ರನ್‌ಗಳ ಕೊಡುಗೆ ಸೋಲಿನ ವಾತಾವರಣ ಸೃಷ್ಟಿ ಮಾಡಿತ್ತು
ಆದರೆ ಭಾರತ ತಂಡದ ಮಿಂಚಿನ ವೇಗದ ಬೌಲರ್ ಮೊಹಮ್ಮದ್ ಶಮಿ ಈ ಜೋಡಿಯನ್ನ ಬೇರೆ ಮಾಡಿ ಭಾರತಕ್ಕೆ ಬಲ ತುಂಬಿದರು ಹೀಗೆ ಮೊದಲು ಕೇನ್ ವಿಲಿಯಮ್ಸನ್ 3 ಬಲಿಯಾ ದರು ಆ ನಂತರವೇ ಮತ್ತೆ ಮ್ಯಾಚ್ ಭಾರತದ ಕೈಗೆ ಬಂದಿದ್ದು 7 ವಿಕೆಟ್ ಪಡೆದು ಶಮಿ ಈ ಒಂದು ಪಂಧ್ಯದಲ್ಲಿ ದೊಡ್ಡ ಸಾಧನೆಯೊಂದಿಗೆ ತಂಡಕ್ಕೆ ಗೆಲುವಿನ ಫಲಿತಾಂಶವನ್ನು ನೀಡಿದರು
ಇನ್ನೂ ಇಡೀ ಪಂದ್ಯದಲ್ಲಿ ಭಾರತದ ಪರವಾಗಿ ಮಿಂಚಿದ ಏಕೈಕ ಬೌಲರ್ ಅಂದ್ರೆ ಮೊಹಮ್ಮದ್ ಶಮಿ ಉಳಿದಂತೆ ಮಿಕ್ಕೆಲ್ಲ ಬೌಲರ್‌ಗಳ ಮೇಲೆ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಅಟ್ಯಾಕ್ ಮಾಡುತ್ತಿದ್ದರೆ ಮೊಹಮ್ಮದ್ ಶಮಿ ಮಾತ್ರ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಮೇಲೆ ದಾಳಿ ಮಾಡಿದರು ಹೀಗೆ ಮೊಹಮ್ಮದ್ ಶಮಿ ಬೌಲಿಂಗ್ ದಾಳಿ ಎದುರು ಬೆಚ್ಚಿಬಿದ್ದ ಕಿವೀಸ್‌ಗೆ ಇನ್ನೇನು ಪಂದ್ಯದ ಅಂತ್ಯದಲ್ಲಿ ಮ್ಯಾಚ್ ಕೈಬಿಟ್ಟು ಹೋಗು ವುದು ಪಕ್ಕಾ ಆಗಿತ್ತು
ಇದೇ ವೇಳೆ ಮೊಹಮ್ಮದ್ ಶಮಿ ಭರ್ಜರಿ 7 ವಿಕೆಟ್ ಪಡೆದರು ಒಟ್ಟು 9.5 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದು ಭಾರತವನ್ನ ಸೋಲಿನ ದವಡೆ ಯಿಂದ ಪಾರು ಮಾಡಿದರು ಇನ್ನೂ ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಬ್ಯಾಟಿಂಗ್ ಅಖಾಡದಲ್ಲಿ ಭರ್ಜರಿ ಅಬ್ಬರ ತೋರಿಸಿತ್ತು.ಅದ್ರಲ್ಲೂ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಗುರಿಯನ್ನ ತಲುಪಿದ್ರು
2023 ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈ ನಲ್ಸ್ ಪಂದ್ಯಲ್ಲಿ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಈ ಶತಮಾನದಲ್ಲಿ ಶತಕಗಳ ಸಾಧನೆ ಮಾಡಿಬಿಟ್ಟರು ಹಾಗೇ ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ವಿರಾಟ್ ಕೋಹ್ಲಿ ಇವತ್ತಿನ ಪಂಧ್ಯದಲ್ಲಿ ಸರಿಗಟ್ಟಿದ್ದಾರೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ 49 ಶತಕ ಸಿಡಿಸಿದ್ದ ಸಚಿನ್ ಸಾಧನೆ ಮೀರಿಸಿ 50ನೇ ಜೀವಮಾನದ ಶತಕವನ್ನು ಬಾರಿಸಿದ್ದಾರೆ ಕೊಹ್ಲಿ ಈ ಮೂಲಕ ಭಾರತ ತಂಡದ ಗೆಲುವಿನಲ್ಲಿ ಕೊಹ್ಲಿ ಕೊಡುಗೆ ಕೂಡ ಮಹತ್ವದ ಪಾತ್ರ ಪಡೆದಿದೆ.
ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಭಾರತ ವಾಂಖೆಡೆ ಕ್ರೀಡಾಂಗಣದಲ್ಲಿ 70 ರನ್‌ಗಳ ಅಮೋಘ ಜಯವನ್ನು ಭಾರತ ತಂಡವು ದಾಖಲಿಸಿದೆ.
2019ರ ವಿಶ್ವಕಪ್‌ನ ಸೆಮಿಪೈನಲ್ ಪಂದ್ಯದಲ್ಲಿ ಸೋತಿದ್ದ ಆ ಒಂದು ಸೇಡನ್ನು ತೀರಿಸಿಕೊಂಡಿದೆ ರೋಹಿತ್ ಪಡೆ ಕಿವೀಸ್ ವಿರುದ್ಧ 70 ರನ್‌ಗಳ ಜಯ ದಾಖಲಿಸಿ ಫೈನಲ್ ಪ್ರವೇಶ ಪಡೆದುಕೊಂ ಡಿದೆ.ನಾಳೆ ಇನ್ನೊಂದು ಸೆಮಿಪೈನಲ್ ಪಂದ್ಯದಲ್ಲಿ ದಕ್ಷಿಣ ಆಪ್ರೀಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿದ್ದು ಇದರಲ್ಲಿ ಗೆಲುವು ಸಾಧಿಸಿದ ತಂಡದೊಂದಿಗೆ ರವಿವಾರ ಭಾರತ ತಂಡವು ಪೈನಲ್ ಪಂಧ್ಯವನ್ನು ಆಡಲಿದೆ.
ಸುದ್ದಿ ಸಂತೆ ನ್ಯೂಸ್ ಮುಂಬೈ…..