ಕೊಪ್ಪಳ –
ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ ಯೋಜನಾ ನಿರಾಶ್ರಿತ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗ ಟ್ರ್ಯಾಪ್ ಹೌದು
ಪ್ರಮಾಣ ಪತ್ರವೊಂದನ್ನು ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಲೋಕಾಯುಕ್ತ ಅಧಿಕಾರಿಗಳು ಭರ್ಜರಿಯಾದ ಕಾರ್ಯಾಚರಣೆಯನ್ನು ಮಾಡಿದ್ದು
ಯೋಜನಾ ನಿರಾಶ್ರಿತ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಟ್ರಾಪ್ ಆಗಿದ್ದಾರೆ.ಸುನಿಲ್ ಕುಮಾರ್ ಕುಲಕರ್ಣಿ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ ತಹಶಿಲ್ದಾರ ಕಚೇರಿಯಲ್ಲಿ ಶಿರಸ್ತೇದಾರ್ ಆಗಿದ್ದಾರೆ ಸುನಿಲ್ ಕುಮಾರ್ ಕುಲಕರ್ಣಿ.ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ನೀಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕೊಪ್ಪಳ ತಾಲ್ಲೂಕಿನ ಗಬ್ಬೂರು ಗ್ರಾಮದ ನಿವಾಸಿಯಾಗಿದ್ದಾರೆ ಕರಿಯಪ್ಪ.ಕೊಪ್ಪಳ ತಹಶಿಲ್ದಾರ ಕಚೇರಿಯಲ್ಲಿ ಲಂಚ ಪಡೆಯು ತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ ಕೊಪ್ಪಳ ಲೋಕಾ ಯುಕ್ತ ಪಿಐ ಶೈಲಾ ಪ್ಯಾಟಿಶೆಟ್ಟರ್ ನೇತೃತ್ವದಲ್ಲಿ ಈ ಒಂದು ದಾಳಿಯಾಗಿದೆ.ರಾಯಚೂರು ಲೋಕಾಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು ಸಧ್ಯ ಅಧಿಕಾರಿಯವನ್ನು ವಶಕ್ಕೆ ತಗೆದುಕೊಂಡಿದ್ದು ಮುಂದಿನ ತನಿಖೆಯನ್ನು ಮಾಡಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..