ತುಮಕೂರು. –
ಲೋಕಾ ಬಲೆಗೆ ಪೊಲೀಸ್ ಪೇದೆಯೊಬ್ಬರು ಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ ಬೆಸ್ಕಾಂ ಜಾಗೃತ ದಳದ ಪೊಲೀಸ್ ಪೇದೆಯೆ ಟ್ರ್ಯಾಪ್ ಆಗಿದ್ದು ತುಮಕೂರು ಬೆಸ್ಕಾಂ ಜಾಗೃದಳ ಕೃಷ್ಣಮೂರ್ತಿ ಬಲೆ ಬಿದ್ದ ಪೊಲೀಸ್ ಪೇದೆ ಯಾಗಿದ್ದಾರೆ.ಗುಬ್ಬಿ ತಾಲೂಕಿನ ಕೆ.ಮತ್ತಿಘಟ್ಟ ಗ್ರಾಮದ ಬಸವರಾಜು.ಎಂ.ಜಿ ದೂರು ನೀಡಿದ್ದರು.
ಶ್ರೀ ಮಂಜುನಾಥ ಅರೇಕಾ ಪ್ಲೇಟ್ಸ್ ತಯಾರಿಕಾ ಶೆಡ್ ಮೇಲೆ ಬೆಸ್ಕಾಂ ದಾಳಿ ಮಾಡಿತ್ತು.ಅ.21 ರಂದು ಬೆಸ್ಕಾಂ ಜಾಗೃತದಳ ದಾಳಿಯಲ್ಲಿ ವಿದ್ಯುತ್ ಮೀಟರ್ ವಶಪಡಿ ಸಿಕೊಳ್ಳಲಾಗಿತ್ತು.ಮೀಟರ್ ಅನ್ನು ವಾಪಸ್ ನೀಡಲು ಕೃಷ್ಣಮೂರ್ತಿ 1,40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ನ. 30 ರಂದು 85 ಸಾವಿರ, ಡಿಸೆಂಬರ್ 07 ರಂದು 40,ಸಾವಿರ ಪಡೆದುಕೊಂಡಿದ್ದರು. ಬಾಕಿ 15 ಸಾವಿರ ರೂ, ಖಾಸಗಿ ಹೋಟಲ್ ನಲ್ಲಿ ಪಡೆದ ವೇಳೆ ಅಧಿಕಾರಿ ಗಳು ದಾಳಿ ಮಾಡಿದ್ದಾರೆ.ಅಧಿಕಾರಿಗಳಾದ ಕೆ.ಜಿ. ರಾಮಕೃಷ್ಣ ಮತ್ತು ಶ್ರೀ ಬಿ.ಉಮಾಶಂಕರ್ ರವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ತುಮಕೂರು…..