ಕುಂದಗೋಳ –
ಎರಡು ಬೈಕ್ ಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾದ ಘಟನೆ ಧಾರವಾಡದ ಕುಂದಗೋಳ ಬಳಿ ನಡೆದಿದೆ. ತಡರಾತ್ರಿ ಈ ಒಂದು ಅಪಘಾತ ನಡೆದಿದೆ. ಕುಂದಗೋಳ ತಾಲ್ಲೂಕಿನ ಕುಬಿಹಾಳದ ಹಲಗೂರು ರಸ್ತೆಯಲ್ಲಿ ಈ ಒಂದು ಅಪಘಾತ ನಡೆದಿದೆ.

ಎರಡು ಬೈಕ್ ಗಳು ಅಪಘಾತದಲ್ಲಿ ಪರಸ್ಪರ ಡಿಕ್ಕಿಯಾಗಿದ್ದು ಘಟನೆಯಲ್ಲಿ ಎರಡು ಬೈಕ್ ನಲ್ಲಿದ್ದ ನಾಲ್ಕು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಒಂದು ಬೈಕ್ ನಲ್ಲಿದ್ದ ಕುಶಾಲ ಚಲವಾದಿ ಮತ್ತು ಲೊಕೇಶ ಚಲವಾದಿ,ಇವರಿಬ್ಬರು ಮಿಶ್ರಿಕೊಟಿ ಮತ್ತು ಹುಬ್ಬಳ್ಳಿಯ ನಿವಾಸಿಗಳಾಗಿದ್ದು ಇನ್ನೂ ಮತ್ತೊಂದು ಬೈಕ್ ನಲ್ಲಿದ್ದ ಕಿರಣ ಗಾಳಿ ಮತ್ತು ಕುಟೇಪ್ಪ ಅವರಿ ಇರಿಬ್ಬರು ಕುಬಿಹಾಳ ನಿವಾಸಿಗಳಾಗಿದ್ದು ಇದರಲ್ಲಿ ಮೂವರ ಕಾಲಿಗೆ ಮತ್ತು ಇತರೆ ಭಾಗಗಳಲ್ಲಿ ಗಂಭೀರವಾದ ಗಾಯಗಳಾಗಿವೆ.

ಇನ್ನೂ ಅಪಘಾತವಾಗುತ್ತಿದ್ದಂತೆ ಸಾರ್ವಜನಿಕರು 108 ಗೆ ಕರೆ ಮಾಡಿದ್ದಾರೆ. ಕರೆ ಬರುತ್ತಿದ್ದಂತೆ 108 ಸಿಬ್ಬಂದಿಗಳು ಸ್ಥಳಕ್ಕೇ ಆಗಮಿಸಿ ಗಾಯಾಳುಗಳನ್ನು ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಕೂಡಲೇ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಯಿತು. 108 ವಾಹನದ ಸಿಬ್ಬಂದಿಗಳಾದ EMT ಪರಶುರಾಮ ಚಂದಾವರ, ಪೈಲಟ್ ಶಿವಾನಂದ ಬೆಳವಂಕಿ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರು. ಸರಿಯಾದ ಸಮಯಕ್ಕೆ ಸ್ಥಳಕ್ಕೇ ಆಗಮಿಸಿದ 108 ಸಿಬ್ಬಂದಿಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.