ಭಾರತೀಯ ಸೈನಿಕನ ಪರದಾಟ – ಸಂಕಷ್ಟದಲ್ಲಿರುವ ಈ ಭಾರತೀಯ ಸೈನಿಕನಿಗೆ ಹುಬ್ಬಳ್ಳಿ ಧಾರವಾಡ ಜನತೆ ಸಹಾಯ ಮಾಡಿ

Suddi Sante Desk

ಹುಬ್ಬಳ್ಳಿ –

ಇದೊಂದು ಭಾರತೀಯ ಸೈನಿಕರೊಬ್ಬರು ನೊಂದಕೊಂಡಿರುವ ಕಥೆ ಇದು ಹುಬ್ಬಳ್ಳಿಗೆ ಬಂದಿದ್ದ ಸೈನಿಕರೊಬ್ಬರು ಗುರುತಿನ ಚೀಟಿಯನ್ನು ಕಳೆದು ಕೊಂಡು ಈಗ ಪರದಾಡುತ್ತಿದ್ದಾರೆ.

ಹೌದು ಇದಕ್ಕೆ ಭಾರತೀಯ ಸೈನ್ಯದಲ್ಲಿರುವ ಶಂಭುಲಿಂಗ ಕಲ್ಲೇನ್ನವರ ಸಾಕ್ಷಿ. ಶಂಭುಲಿಂಗ ಕಲ್ಲೇದವರ ಹಾವೇರಿ ಜಿಲ್ಲೆಯ ನಿವಾಸಿ.ಭಾರತೀಯ ಸೈನ್ಯದಲ್ಲಿ ಇದ್ದಾರೆ‌. ಜನೇವರಿ 11 ರಂದು ರಜೆಯ ಮೇಲೆ ಊರಿಗೆ ಬಂದ ಸಂದರ್ಭದಲ್ಲಿ ಹುಬ್ಬಳ್ಳಿಗೆ ಬಂದಿದ್ದರು.

ಹುಬ್ಬಳ್ಳಿಯ ಸರ್ಕಲ್ ಚರ್ಚ್ ನಿಂದ ಸಿದ್ದಾರೂಢ ಮಠಕ್ಕೆ ಆಟೋ ದಲ್ಲಿ ತೆರಳುವಾಗ ಭಾರತೀಯ ಸೈನ್ಯದ ಗುರುತಿನ ಚೀಟಿಯನ್ನು ಕಳೆದುಕೊಂಡಿ ದ್ದಾರೆ. ಈ ಕುರಿತಂತೆ ಅಂದಿನಿಂದ ಈರವೆಗೆ ತಾವು ಪ್ರಯಾಣ ಮಾಡಿದ ಆಟೋ ಸೇರಿದಂತೆ ಹುಬ್ಬಳ್ಳಿ ಧಾರವಾಡ ಆಟೋ ಚಾಲಕರು ಸಂಘದವರು ಹೀಗೆ ಎಲ್ಲರನ್ನೂ ವಿಚಾರಣೆ ಮಾಡಿದ್ದಾರೆ.

ಈವರೆಗೆ ಕಳೆದುಕೊಂಡ ಐಡಿ ಕಾರ್ಡ್ ಪತ್ತೆಯಾಗಿಲ್ಲ ಹೀಗಾಗಿ ಸದ್ಯ ಕರ್ತವ್ಯದ ಮೇಲಿರುವ ಸೈನಿಕನಿಗೆ ಇಲಾಖೆಯವರು ತುಂಬಾ ತುಂಬಾ ಕಿರಿಕಿರಿಯಾ ಗುತ್ತಿದೆಯಂತೆ.

ಹೀಗಾಗಿ ಇದರಿಂದ ನನಗೆ ತುಂಬಾ ಸಮಸ್ಯೆಯಾಗಿದ್ದು ಐಡಿ ಕಾರ್ಡ್ ಕಳೆದ ಕಾರಣ ನಾನು ಸಧ್ಯ ಭಾರತೀಯ ಸೈನಿಕ ಇಲಾಖೆಯಿಂದ ನೌಕರಿಯಿಂದ ಹೊರಗೆ ಬರುವಂತಹ ಪರಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ .

ನನ್ನ ಐಡಿಕಾರ್ಡ್ ಯಾರಿಗಾದರೂ ಸಿಕ್ಕರೆ ದಯಮಾಡಿ ನನಗೆ ಕೊಡಿ ಪ್ಲೀಸ್ ಪ್ಲೀಸ್ ಎಂದುಕೊಂಡು ಭಾರತೀಯ ಸೈನಿಕ ಶಂಭುಲಿಂಗ ವಿಡಿಯೋ ಮಾಡಿಹರಿಬಿಟ್ಟಿದ್ದಾರೆ.

ಕಳೆದುಕೊಂಡಿರುವಐಡಿ ಕಾರ್ಡ್ ನ್ನು ನೀವುನನಗೆ ಕೊಟ್ಟರೆ ಹತ್ತು ಸಾವಿರ ರೂಪಾಯಿ ಬಹುಮಾನ ಕೊಡುತ್ತೇನೆ ಎಂದು ಸಾರ್ವಜನಿಕರಿಗೆ ಮತ್ತು ಆಟೋ ಚಾಲಕರಿಗೆ ಸಂಘದವರಿಗೆ ಇವರು ವಿನಂತಿ ಮಾಡಿಕೊಂಡಿದ್ದಾರೆ. ದಯಮಾಡಿ ಇದೊಂದ ಸಹಾಯ ಮಾಡಿ ಎಂದು ವಿಡಿಯೋದಲ್ಲಿ ಸೈನಿಕ ಮಾತನಾಡಿದ್ದಾರೆ. ಇವರ ಹೆಸರಿನಲ್ಲಿ ನಿಮಗೇನಾದರೂ ಐಡಿ ಕಾರ್ಡ್ ಸಿಕ್ಕರೆ ದಯಮಾಡಿ ಇವರಿಗೆ ಇಲ್ಲವೇ ಹುಬ್ಬಳ್ಳಿಯ ಆಟೋ ಚಾಲಕರ ಸಂಘದ ಮುಖಂಡರಾಗಿರುವ ಚಿದಾನಂದ ಸವದತ್ತಿ ಅವರಿಗೆ ಕೂಡಲೇ ಮಾಹಿತಿ ನೀಡಿ ನೇರವಾಗಿ ಸಂಪರ್ಕಕ್ಕೆ ದೂರವಾಣಿ ಸಂಖ್ಯೆ 9591164556 ಇಲ್ಲವೇ ನಮಗಾದರೂ ತಿಳಿಸಿ 9945458908 ಸುದ್ದಿ ಸಂತೆ ವೇಬ್ ನ್ಯೂಸ್.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.