ಕಾಮುಕರ ವಿರುದ್ಧ ದಾಖಲಾಯಿತು ದೂರು – ಜಿಲ್ಲಾ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ

Suddi Sante Desk

ಧಾರವಾಡ –

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ವಿಚಾರ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಧಾರವಾಡ ತಾಲ್ಲೂಕಿನ ಕಲ್ಲಾಪೂರ ಗ್ರಾಮದಲ್ಲಿ ಒಂಬತ್ತನೆಯ ತರಗತಿ ಕಲಿಯುತ್ತಿರುವ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರಿಂದ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದರು.ಇದನ್ನು ಗ್ರಾಮಸ್ಥರು ನೋಡಿ ಬಾಲಕಿಯನ್ನು ರಕ್ಷಣೆ ಮಾಡಿದ್ದರು.ಈಗ ಬಾಲಕಿಯ ಪೋಷಕರ ದೂರಿನ ಹಿನ್ನಲೆಯಲ್ಲಿ ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿನ ರಸಮಂಜರಿ ಕಾರ್ಯಕ್ರಮ ನೋಡಿ ಬರುವಾಗ ಬಾಲಕಿಯನ್ನು ಕರೆದೊಯ್ದು ಮೂವರು ಬಾಲಕರು ಅತ್ಯಾಚಾರಕ್ಕೆ ಯತ್ನಿಸಿದ್ದರು.ನಂತರ ಬಾಲಕಿಯ ಕಿರುಚಾಟ ಕೇಳಿದ ಗ್ರಾಮಸ್ಥರು ರಕ್ಷಣೆ ಮಾಡಿದ್ದರು. ಇವೆಲ್ಲದರ ನಡುವೆ ಈಗ ಮೂವರು ಕಾಮುಕರ ಮೇಲೆ ದೂರು ದಾಖಲಾಗಿದೆ.

ಬಾಲಕಿಯನ್ನು ಎಳೆದೊಯ್ದ ಮಂಜುನಾಥ ಬಡಿಗೇರ, ಇವನೊಂದಿಗೆ ಇದ್ದ ಸುನೀಲ್ ಮತ್ತು ಪ್ರಕಾಶ್ ಸ್ಥಳದಲ್ಲೇ ಇದ್ದರು.ಬಾಲಕಿ ಸ್ಪಂದಿಸದೇ ಇದ್ದಾಗ ಬಾಯಲ್ಲಿ ಬಟ್ಟೆ ತುರಿಕಿ ಹೊಡಿ ಬಡಿದು ಮಾಡಿ ನಂತರ ಮನೆಯೊಳಗೆ ಯಾರೋ ಬಂದ ಮೇಲೆ ಮೂವರು ಬಾಲಕಿಯನ್ನು ಬಿಟ್ಟು ಹೋಗಿದ್ದಾರೆ. ಸಧ್ಯ ಈ ಮೂವರ ಮೇಲೆ ದೂರು ದಾಖಲಾಗಿದೆ. ಇನ್ನೂ ಈ ಒಂದು ವಿಚಾರ ತಿಳಿದ ಮಹಿಳಾ ಸಂಘಟನೆಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿ ಘಟನೆಯನ್ನು ಖಂಡಿಸಿದರು.

ಸಧ್ಯ ಆಸ್ಪತ್ರೆಯಲ್ಲಿ ಬಾಲಕಿ ಚಿಕಿತ್ಸೆ ಪಡೆದುಕೊಳ್ಳು ತ್ತಿದ್ದು ಇತ್ತ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.