ಹುಬ್ಬಳ್ಳಿ –
ತೆಲೆಮರಿಸಿಕೊಂಡಿದ್ದ 5 ಜನರ ದರೋಡೆಕೋರನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರಿಂದ 7 ಲಕ್ಷ ನಗದು ಹಣ ವಶವನ್ನು ತೆಗೆದುಕೊಳ್ಳಲಾಗಿದೆ .

ದಿನಾಂಕ:- 21.01.2019 ರಂದು ಶಿರಸಿಯಿಂದ ಅಬ್ದುಲ್‍ರಜಾಕ್ ಬೋಂಗ ಇವರು ವ್ಯವಹಾರಕ್ಕೆ ಸಂಬಂಧಪಟ್ಟ 35 ಲಕ್ಷ ರೂ. ನಗದು ಹಣವನ್ನು ತೆಗೆದುಕೊಂಡು ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ತಮ್ಮ ಊರಿಗೆ ಹೋಗುವ ಮಂಗಳೂರ ಬಸ್ಸನ್ನು ಹತ್ತಿ ಹೋಗುವಾಗ ಕಾರವಾರ ರೋಡ ಟೋಲ ಪ್ಲಾಜಾ ಹತ್ತಿರ ಬೈಪಾಸ್ ರಸ್ತೆಯ ಮೇಲೆ ಯಾರೋ ಎರಡು ಜನರು ಬಸ್ಸಿನಲ್ಲಿ ಅಬ್ದುಲ್‍ರಜಾಕ ಇವರೊಂದಿಗೆ ಏಕಾಏಕಿ ನಮ್ಮ ತಂಗಿ ಎಲ್ಲಿ ಇದ್ದಾಳೆ ಹೇಳು ಅನ್ನುತ್ತಾ ಕೈಯಿಂದ ಹೊಡಿಬಡಿ ಮಾಡಿ, ಬಸ್ ನಿಲ್ಲಿಸಿ, ಕೆಳಗೆ ಇಳಿಸಿ ದೂಡಾಡಿ ನಗದು ಹಣ ಇದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿ ಹೋಗಿದ್ದರು.

ಈ ಬಗ್ಗೆ ಅಬ್ದುಲ್‍ರಜಾಕ್ ಇವರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಇತ್ತು. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಎಸ್.ಎಸ್. ಕಮತಗಿ ಇವರ ನೇತೃತ್ವದಲ್ಲಿ ವಿಶೇಷವಾದ ತಂಡವನ್ನು ರಚಿಸಿದ್ದರು. ಸದರಿ ತಂಡವು ಈ ಪ್ರಕರಣದ ಬಗ್ಗೆ ಕೂಲಂಕುಷವಾಗಿ ಚಾಣಾಕ್ಷತನದಿಂದ ತನಿಖೆ ಕೈಕೊಂಡು ಈ ಪ್ರಕರಣದಲ್ಲಿ 05 ಜನ ಆರೋಪಿತರನ್ನು ಬಂಧನ ಮಾಡಿದ್ದಾರೆ
.
ಖಾಜಾ ತಂದೆ ಮಹಮ್ಮದ ಯುಸೂಫ ದುಖಾನದಾರ , ಹುಬ್ಬಳ್ಳಿಯ ಬದಾದಾಪೀರ ತಂದೆ ವಜೀರ ಅಹಮ್ಮದ ನದಾಫ ವಯಾ: 32 ವರ್ಷ ಸಾ: ಹುಬ್ಬಳ್ಳಿ ರೇಲ್ವೆ ರಸೂಲಖಾನ@ಖಾಲಾ ರಸೂಲ ತಂದೆ ನಜೀರಅಹ್ಮದ ಬಾಗಲಕೋಟ ವಯಾ 38 ವರ್ಷ ಸಾ:ಹುಬ್ಬಳ್ಳಿ ಇವರನ್ನು ಪತ್ತೆ ಮಾಡಿ ದಿನಾಂಕ 19.01.2021 ರಂದು ದಸ್ತಗೀರ ಮಾಡಿ ಈ ಪ್ರಕರಣದಲ್ಲಿ ದರೋಡೆ ಮಾಡಿಕೊಂಡು ಹೋ್ಉ
ಹೋದ ಹಣದ ಪೈಕಿ 7,00,000/- ರೂ. ನಗದು ಹಣವನ್ನು ಹಾಗೂ ಒಂದು ಇಂಡಿಗೋ ಕಾರ, ಒಂದು ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಹಾಗೂ ಒಂದು ಡಿಯೋಮೋಟಾರ್ ಸೈಕಲ್ಲನ್ನು ಜಪ್ತಿ ಮಾಡಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಈ ಪ್ರಕರಣವನ್ನು ಬೇಧಿಸಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಶ್ರೀ ಎಸ್.ಎಸ್. ಕಮತಗಿ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.