ಕುಂದಗೋಳ –
ACB ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯೇ ಬೇಕೆಂದು ಹಠಕ್ಕೆ ಬಿದ್ದಿದ್ದಾರೆ ಧಾರವಾಡ ಜಿಲ್ಲೆಯ ಕುಂದಗೋಳದ ಶಾಸಕಿ ಕುಸುಮಾವತಿ ಶಿವಳ್ಳಿ. ಇವರು ನಮ್ಮ ಕ್ಷೇತ್ರಕ್ಕೆ ಬೇಕು ಇವರನ್ನು ನಮಗೆ ಕೊಡಿ ಎಂದು ಪತ್ರ ಬರೆದು ಭ್ರಷ್ಟ ಅಧಿಕಾರಿಗೆ ಸಪೋಟ್ ಮಾಡುತ್ತಿದ್ದಂತೆ ಕಾಣುತ್ತಿದೆ ಇವರ ನಡೆ.

ಅದೇ ಅಧಿಕಾರಿ ಬೇಕೆಂದು ಬೆಂಗಳೂರು ತೋಟಗಾರಿಕೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಇವರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಶಪಡಿಸಿಕೊಳ್ಳಲಾದ ರೈತರ ತೆಂಗಿನ ಮರದ ಪರಿಹಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಕುಂದಗೋಳದ ತೋಟಗಾರಿಕೆ ಇಲಾಖೆಯ ಅಧಿಕಾರಿ ಪರಶುರಾಮ.ಡಿಸೆಂಬರ್ 14 ರಂದು ಲಂಚ ಸ್ವೀಕರಿಸುತ್ತಿದ್ದಾಗ ಪೋಲೀಸರ ಬಲೆಗೆ ಬಿದ್ದಿದ್ದರು ಈ ಅಧಿಕಾರಿ.

ACB ಪೋಲೀಸರ ಬಲೆಗೆ ಬಿದ್ದಿದ್ದ ಪರಶುರಾಮ್ ಮಾ.ಕಾಳೆ ಕುಂದಗೋಳದ ಸಹಾಯಕ ತೋಟಗಾರಿಕೆ ನಿರ್ದೇಶಕರಾಗಿದ್ದು .ಜ್ಯೆಲಿಗೆ ಹೋಗಿ ಬಂದು ಸಧ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಈ ಅಧಿಕಾರಿಯೇ ಬೇಕೆಂದು ಪಟ್ಟು ಹಿಡಿದು ಪತ್ರ ಬರೆದಿದ್ದಾರೆ ಕಾಂಗ್ರೆಸ್ ಪಕ್ಷದ ಶಾಸಕಿಯವರು.

ಜ್ಯೆಲಿಗೆ ಹೋಗಿ ಬಂದರೂ ಅವರೊಬ್ಬರು ಒಳ್ಳೆಯ ಅಧಿಕಾರಿ ಅಂತೆ.ಅಲ್ಲದೇ ರೈತರಿಂದಲೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಕೂಡಾ ರೈತರ ಪರವಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರಂತೆ. ಅವರನ್ನು ಅಮಾನತ್ತಿನಲ್ಲಿಡಬೇಡಿ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ.

ಶಾಸಕಿಯವರು ಬರೆದ ಪತ್ರ ಸುದ್ದಿ ಸಂತೆಗೆ ಲಭ್ಯವಾಗಿದೆ.ಇನ್ನೂ ಈ ಒಂದು ಪತ್ರದಿಂದ ಕುಂದಗೋಳ ಜನತೆ ಅಸಮಾಧಾನಗೊಂಡಿದ್ದಾರೆ ಕುಂದಗೋಳ ಜನತೆ.