ನವದೆಹಲಿ –
ಮುಂಬರುವ ಕೇರಳ ರಾಜ್ಯದ ವಿಧಾನ ಸಭಾ ಚುನಾವಣಾ ಪ್ರಭಾರಿಯನ್ನಾಗಿ ಧಾರವಾಡ ಜಿಲ್ಲೆಯ ಸಂಸದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ.
ಇವರೊಂದಿಗೆ ಸಹ ಪ್ರಭಾರಿಯಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಅವರನ್ನು ನೇಮಕ ಮಾಡಲಾಗಿದೆ.ಪಕ್ಷದ ರಾಷ್ಟ್ರೀಯ ಮುಖಂಡರು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.ಇನ್ನೂ ಇತ್ತ ಇವರ ನೇಮಕದಿಂದಾಗಿ ಧಾರವಾಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮುಖಂಡರು ಸಂತಸಗೊಂಡಿದ್ದಾರೆ.