ಹುಬ್ಬಳ್ಳಿ –
ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು ಸೇರಿಕೊಂಡು ಗ್ರಾಮ ಪಂಚಾಯತ ನಲ್ಲಿ ಹೋಮ ಹವನ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮುಕ್ಕಲ್ ಗ್ರಾಮದಲ್ಲಿ ಈ ಒಂದು ಪೂಜೆ ನಡೆದಿದೆ. ಗ್ರಾಮದ ಪಂಚಾಯತ ಗೆ ಅಧ್ಯಕ್ಷ ಉಪಾಧ್ಯಕ್ಷ ರಾಗಿ ಆಯ್ಕೆಯಾದ ಬೆನ್ನಲ್ಲೇ ಎಲ್ಲರೂ ಸೇರಿಕೊಂಡು ಗ್ರಾಮ ಪಂಚಾಯತ ನಲ್ಲಿ ಅದ್ದೂರಿಯಾಗಿ ಹೋಮ ಹವನ ಮಾಡಿದ್ದಾರೆ.

ಹೀಗೆ ಮಾಡಿದ ಇವರೆಲ್ಲರೂ ಈಗ ಗ್ರಾಮದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಗ್ರಾಮ ಪಂಚಾಯತಿ ಯ ನೂತನ ಎಲ್ಲಾ ಸದಸ್ಯರು.

ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರಿಂದ ಹೋಮ ಹವನ ನಡೆಯಿತು. ಪಂಚಾಯತಿ ಯಲ್ಲಿ ಹೋಮ ಹವನ ಮಾಡಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮ ಪಂಚಾಯತಿಯಲ್ಲಿ ಪೂಜೆ ಪಿಡಿಓ ಮುಂದೆನೆ ಹೋಮ ಹವನ ಅಧಿಕಾರ ಸ್ವೀಕರಿಸುವ ಮುನ್ನ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಕ್ಕೆ ಗ್ರಾಮಸ್ಥರ ಆಕ್ರೋಶಗೊಂಡಿದ್ದಾರೆ.

ಹೋಮ ಹವನ ಮಾಡೋದು ಬಿಟ್ಟು ಗ್ರಾಮವನ್ನ ಅಭಿವೃದ್ಧಿ ಮಾಡಿ ಎಂದು ಗ್ರಾಮಸ್ಥರ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಿಸಿದ್ದು ಗ್ರಾಮದ ಅಭಿವೃದ್ಧಿ ಮಾಡಲಿಕ್ಕೆ, ಪಂಚಾಯತಿ ಯಲ್ಲಿ ಹೋಮ ಮಾಡಲಿಕ್ಕಲ್ಲ.

ಪೂಜೆ ಬಿಡಿ, ಗ್ರಾಮದ ಜನರ ಕಷ್ಟಕ್ಕೆ ಸ್ಪಂದಿಸಿ ಎಂದು ಜನರ ಆಗ್ರಹವನ್ನು ಮಾಡುತ್ತಿದ್ದು ಇವೆಲ್ಲದರ ನಡುವೆ ಈಗ ಹೋಮ ಹವನ ಮಾಡಿ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.