ವಡೋದರಾ –
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಗುಜರಾತ್ ನ ವಡೋದರಾ ದಲ್ಲಿ ನಡೆದಿದೆ.64 ವರ್ಷದ ವಿಜಯ್ ರೂಪಾನಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಸರಕಾರಿ ವಿಮಾನದ ಮೂಲಕ ಅಹಮದಾಬಾದ್ ಗೆ ಕರೆದೊಯ್ಯಲಾಗಿದೆ.
ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯ ಕಾರಣ ರೂಪಾನಿ ಅಸ್ವಸ್ಥಗೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಪ್ತ ವಲಯಗಳು ತಿಳಿಸಿವೆ.
ಭಾಷಣ ಮಾಡುವ ವೇಳೆ ರೂಪಾನಿ, ಲವ್ ಜಿಹಾದ್ ಮೂಲಕ ಬಲವಂತದ ಮತಾಂತರ ಪಿಡುಗು ತಡೆಯಲು ರಾಜ್ಯದಲ್ಲಿ ಕಾನೂನು ಜಾರಿಗೆ ತರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅವರನ್ನು ಕೆಳಗೆ ಬೀಳದಂತೆ ನೋಡಿಕೊಂಡರು.