ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು – ಕಾರು ಲಾರಿ ನಡುವೆ ಅಪಘಾತ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಮೃತರಾ ಗಿದ್ದಾರೆ.ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತ ದಲ್ಲಿ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ

ಹೌದು ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ತಾರಿಹಾಳ ಬಳಿ ನಡೆದಿದೆ.ಆನಂದ್(47) ಹಾಗೂ ಪೃಥ್ವಿ ರಾಜ್ ತೇಲಿ(16) ಮೃತರಾದ ದುರ್ದೈವಿಗಳಾಗಿದ್ದಾರೆ

ಮಲ್ಲಿಕಾರ್ಜುನ ತೇಲಿ,ಕಬ್ಬೂರ್ ಆದಿತ್ಯ ಹಾಗೂ ಸುಭಾಷ್ ಮಿಶ್ರಕೋಟಿ ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಬ್ಬಳ್ಳಿ ತಾಲೂಕಿನ ತಾರಿಹಾಳ ಬಳಿ ಬೆಳ್ಳಂ ಬೆಳಿಗ್ಗೆ ನಡೆದ ಘಟನೆಯಿಂದಾಗಿ ಕೆಲವೊತ್ತು ರಸ್ತೆ ಸಂಚಾರ ಸಂಪೂರ್ಣ ವಾಗಿ ಜಾಮ್ ಅಗಿದ್ದು ಕಂಡು ಬಂದಿತು.ಕಾರು – ಲಾರಿ ನಡುವೆ ಸಂಭವಿಸಿದ್ದ ಅಪಘಾತವಾಗಿದ್ದು ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ

ಗಾಯಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇಬ್ಬರ ಸ್ಥಿತಿ ಗಂಭೀರವಾಗಿದ್ದು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.