ಧಾರವಾಡ –
ಧಾರವಾಡದ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಬಾಲಕರಿಗೆ ನ್ಯಾಯಾಲಯ ಎಂಟು ದಿನಗಳ ನ್ಯಾಯಾಂಗ ಬಂಧನ ನೀಡಿದೆ. ಧಾರವಾಡದ ಜಿಲ್ಲಾ ನ್ಯಾಯಾಲಯ ಮೂವರು ಕಾಮುಕ ಬಾಲಕರಿಗೆ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿದೆ.

ಬಾಲಕಿಯ ಪೋಷಕರ ದೂರಿನ ಹಿನ್ನಲೆಯಲ್ಲಿ ಧಾರವಾಡದ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಬಂಧನದ ನಂತರ ಮೂವರನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದು ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶವನ್ನು ನೀಡಿದ್ದಾರೆ. ಇನ್ನೂ ಇತ್ತ ಧಾರವಾಡ ಮಹಿಳಾ ಠಾಣೆ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.