ಕುಂದಗೋಳ –
ಅಣ್ಣಿಗೇರಿ ತಾಲ್ಲೂಕಿನ ಕೊಂಡಿಕೊಪ್ಪ ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ಗ್ರಾಮದಲ್ಲಿ ಕಳ್ಳತನ ನಡೆದಿದೆ. ಗ್ರಾಮದ ಶ್ಯಾಗೊಟಿ ಪ್ಲಾಟ್ ನಲ್ಲಿರವ ದುರ್ಗಾದೇವಿ ದೇವಸ್ಥಾನದ ಕಳ್ಳತನ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಈ ಒಂದು ದೇವಸ್ಥಾನವಿದೆ. ವಾರದಲ್ಲಿ ಎರಡು ಬಾರಿ ದುರ್ಗಾದೇವಿಗೆ ಬಂಗಾರದ ಆಭರಣಗಳನ್ನು ಹಾಕಲಾಗುತ್ತದೆ.ನಿನ್ನೇಯೂ ಬೆಳಿಗ್ಗೆ ಅರ್ಚಕರು ದೇವಗೆ ಪೂಜೆಯನ್ನು ಮಾಡಿ ನಂತರ ಬಂಗಾರದ ಆಭರಣಗಳನ್ನು ಹಾಕಿ ಸಂಜೆ ಮನೆಗೆ ಹೋಗುವ ಸಮಯದಲ್ಲಿ ಅವುವಗಳನ್ನು ತಗೆದುಕೊಂಡು ಹೋಗಿದ್ದಾರೆ.
ಇತ್ತ ಇವತ್ತು ದೇವಿಗೆ ಬಂಗಾದರ ಆಭರಣಗಳನ್ನು ಹಾಕಿದ್ದಾರೆಂದುಕೊಂಡು ಕಳ್ಳತನಕ್ಕೇ ಸ್ಕೇಚ್ ಆಕಿದ್ದಾರೆ. ಕಳ್ಳತನ ಮಾಡಲು ಪ್ಲಾನ್ ಮಾಡಿಕೊಂಡು ಬಂದು ದೇವಾಲಯದ ಹೊರಗಿನ ಟೈಲ್ಸ್ ಹೊಡೆದು ಬಾಗಿಲು ತಗೆದಿದ್ದಾರೆ. ಇನ್ನೇನು ಮೂರ್ತಿಯ ಮೇಲೆ ಬಂಗಾರದ ಆಭರಣಗಳನ್ನು ತಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಬಂಗಾರದ ಆಭರಣಗಳು ಕಳ್ಳರಿಗೆ ಸಿಕ್ಕಿಲ್ಲ ಬದಲಿಗೆ ಬೇರೆ ಆಭರಣಗಳಿದ್ದು ಇವುಗಳು ಉಪಯೋಗವಾಗೊದಿಲ್ಲ ಎಂದುಕೊಂಡ ಕಳ್ಳರು ಕೈಗೆ ಸಿಕ್ಕ ಹುಂಡಿಯಲ್ಲಿನ ಹಣವನ್ನು ಇನ್ನಿತರ ವಸ್ತುಗಳನ್ನು ತಗೆದುಕೊಂಡು ಹೋಗಿದ್ದಾರೆ. ಇನ್ನೂ ಬೆಳಗಾಗುತ್ತಿದ್ದಂತೆ ದೇವಸ್ಥಾನದ ಬಾಗಿಲು ಮುರಿದ ಚಿತ್ರಣವನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ರು. ವಿಷಯ ತಿಳಿದ ಅಣ್ಣಿಗೇರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ದೇವಾಲಯದಲ್ಲಿ ಏನೇನು ಕಳ್ಳತನವನ್ನು ಮಾಡಲಾಗಿದೆ ಏನೇನು ಹೋಗಿದೆ ಎಂಬ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇನ್ನೂ ಇತ್ತ ದೊಡ್ಡ ಪ್ರಮಾಣದಲ್ಲಿ ಕಳ್ಳತನಕ್ಕೇ ಪ್ಲಾನ್ ಮಾಡಿಕೊಂಡು ಬಂದಿದ್ದ ಕಳ್ಳರು ನಿರಾಶೆಯಿಂದ ಕೈಗೆ ಸಿಕ್ಕ ಅಲ್ಪ ಸ್ವಲ್ಪು ವಸ್ತುಗಳನ್ನು ಹಣವನ್ನು ತಗೆದುಕೊಂಡು ದೇವಾಲಯಕ್ಕೇ ಹಾನಿ ಮಾಡಿ ಹೋಗಿದ್ದಾರೆ.