ಧಾರವಾಡ –
ಮಾಸ್ಕ್ ಹಾಕುವ ವಿಚಾರದಲ್ಲಿ ಬುದ್ದಿ ಹೇಳಿದ PDO ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಧಾರವಾಡ ದ ಹಳ್ಳಿಗೇರಿ ಯಲ್ಲಿ ಬಂಧನ ಮಾಡಲಾಗಿದೆ.ನಿನ್ನೆ ಸಂಜೆ ಹಳ್ಳಿಗೇರಿ ಯಲ್ಲಿ ಶಾಲೆಯ ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡತಾ ಇದ್ದರು ಈ ಒಂದು ಸಮಯದಲ್ಲಿ ಪಿಡಿಓ ಬುದ್ದಿ ಹೇಳಿ ಮಾಸ್ಕ್ ಹಾಕಲು ಹೇಳಿದರು ಈ ಒಂದು ಸಮಯದಲ್ಲಿ ಆಕ್ರೋಶ ಗೊಂಡು ಅವರ ಮೇಲೆ ಹಲ್ಲೆ ಮಾಡಿದ್ದರು

ಹೌದು ನವೀನ ರಾಮಪ್ಪ ಕೊಟಳ್ಳಿ ಪಿಡಿಓ ಮೃತ್ಯುಂಜಯ ಮೆಣಸಿನಕಾಯಿ ಮೇಲೆ ಹಲ್ಲೆ ಮಾಡಿದ್ದರು ಈ ಕುರಿತು ಪಿಡಿಓ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿ ದ್ದರು. ದೂರು ದಾಖಲಾಗುತ್ತಿದ್ದಂತೆ ಧಾರವಾಡ ಗ್ರಾಮೀಣ ಪಿಎಸ್ ಐ ಮಹೇಂದ್ರ ನಾಯಕ ಮತ್ತು ಟೀಮ್ ಕಾರ್ಯಾಚರಣೆ ಮಾಡಿ ಆರೋಪಿ ನವೀನ್ ನನ್ನು ಬಂಧನ ಮಾಡಿದ್ದಾರೆ

ಸಧ್ಯ ಆರೋಪಿ ನವೀನ ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ