ಹುಬ್ಬಳ್ಳಿ –
ಸಾಮಾನ್ಯವಾಗಿ ನಾವು ಆ ಜಾತಿಯವರು ನೀವು ಈ ಜಾತಿಯವರು ಎನ್ನುತ್ತಾ ಧರ್ಮದ ಸಂಘರ್ಘದ ನಡುವೆ ಹುಬ್ಬಳ್ಳಿಯಲ್ಲಿ ಸಮಾಜ ಸೇವಕ ಕನ್ನಡಪರ ಸಂಘಟನೆಯ ಹೋರಾಟಗಾರ ಸಂಗೋಳ್ಳಿ ರಾಯಣ್ಣ ವೇದಿಕೆಯ ಯುವಕ ಮುಖಂಡ ಜೈ ಚನ್ನಮ್ಮಾ ಜೈ ರಾಯಣ್ಣ ಎನ್ನುತ್ತಾ ಯುವ ಪಡೆಯನ್ನು ಬೆನ್ನಿಗೆ ಕಟ್ಟಿಕೊಂಡು ಸದಾ ಯಾವಾಗ ಲೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಹುಬ್ಬಳ್ಳಿಯ ಸುರೇಶ ಗೋಕಾಕ ಸದ್ದಿಲ್ಲದೇ ಎಲ್ಲರೂ ಮೆಚ್ಚುವ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ.
ಹೌದು ಸಾಮಾನ್ಯವಾಗಿ ಯಾರಾದರೂ ಗೃಹ ಪ್ರವೇಶ ಇಲ್ಲವೇ ಮದುವೆ ಇದ್ದರೆ ಅಲ್ಲಿ ಏನಾದರೂ ಗಿಪ್ಟ್ ಇಲ್ಲವೇ ಹಣವನ್ನು ನೀಡಿ ಶುಭ ಹಾರೈಸುತ್ತೇವೆ ಆದರೆ ಇದರ ನಡುವೆ ಸುರೇಶ ಗೋಕಾಕ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೆ ನಾಲ್ಕೈದು ಜನ ಮೆಚ್ಚುವ ಕಾಣಿಕೆಯನ್ನು ನೀಡಿ ಶುಭ ಹಾರೈಸಿ ಬರುತ್ತಿದ್ದಾರೆ.ಹೌದು ಒಂದು ಕಡೆಗೆ ಧರ್ಮ ಉಳಿಯಬೇಕು ಹಾಗೇ ಇದರೊಂ ದಿಗೆ ತಾವು ನೀಡಿದ ಮಹತ್ವದ ವಸ್ತುವಿನಿಂದ ಅವರಿಗೆ ಅವರದೇ ಆದ ಧರ್ಮ ಮತ್ತು ಸಂಸ್ಕ್ರತಿ ಹೀಗೆ ಎಲ್ಲವೂ ಉಳಿಯಲಿ ಎಂಬ ಒಂದೇ ಒಂದು ಕಾರಣಕ್ಕಾಗಿ ಹಿಂದೂ ಗಳ ಕಾರ್ಯಕ್ರಮಕ್ಕೆ ಹೋದರೆ ಅಲ್ಲಿ ಭಗವದ್ಗೀತೆ ನೀಡಿ ಶುಭ ಹಾರೈಸುತ್ತಾರೆ.
ಇನ್ನೂ ಇತ್ತ ಮುಸ್ಲಿಂ ಧರ್ಮದ ಗೆಳೆಯರ ಕಾರ್ಯಕ್ರಮಕ್ಕೆ ಹೋದರೆ ಅವರಿಗೆ ಖುರಾನ್ ನೀಡುತ್ತಾರೆ.ಈ ಒಂದು ವಿಶೇಷವಾದ ಸಂಪ್ರದಾಯವನ್ನು ಕಳೆದ ಹಲವಾರು ವರ್ಷ ಗಳಿಂದ ಮಾಡಿಕೊಂಡು ಬರುತ್ತಿದ್ದು ಯಾವುದೇ ಗಿಪ್ಟ್ ಹಣವನ್ನು ನೀಡದೆ ತಮ್ಮೊಂದಿಗೆ ಸಂಘಟನೆಯ ಯುವ ಪಡೆಯನ್ನು ಕಟ್ಟಿಕೊಂಡು ಧರ್ಮ ಉಳಿಯುವ ನಿಟ್ಟಿನಲ್ಲಿ ಈ ಒಂದು ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ ಇತ್ತೀಚಿಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರನ್ನು ಭೇಟಿಯಾಗಿ ಅವರಿಗೂ ಕೂಡಾ ಭಗವದ್ಗೀತೆ ಗ್ರಂಥವನ್ನು ನೀಡಿ ಶುಭ ಹಾರೈಸಿದ್ದರು.
ಯಾರಾದರೂ ಮದುವೆ ಗೃಹ ಪ್ರವೇಶ ಸೇರಿದಂತೆ ಯಾವುದಾದರೂ ಕಾರ್ಯಕ್ರಮಕ್ಕೆ ಹೇಳಿದರೆ ತಪ್ಪದೇ ಸುರೇಶ ಗೋಕಾಕ ಅವರು ಪಾಲ್ಗೊಂಡು ಅವರಿಗೆ ಆಯಾ ಧರ್ಮದ ಗ್ರಂಥವನ್ನು ನೀಡಿ ಶುಭ ಹಾರೈಸುತ್ತಾ ಧರ್ಮ ವನ್ನು ಉಳಿಸಿ ಬೆಳೆಸುವ ಮತ್ತು ಅವರವರ ಧರ್ಮದ ಸಂಸ್ಕ್ರತಿ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ವನ್ನು ಮಾಡುತ್ತಿದ್ದಾರೆ.ಇದರೊಂದಿಗೆ ಸುರೇಶ ಗೋಕಾಕ ಹತ್ತಾರ ಜನ ಯುವಕರೊಂದಿಗೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಸಮಾಜಮುಖಿಯಾಗಿರುವ ಕೆಲಸ ಕಾರ್ಯ ಗಳನ್ನು ಮಾಡುತ್ತಿದ್ದು ಈಗ ಮತ್ತೆ ಹೊಸದೊಂದು ಕಾರ್ಯದ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಇತರರಿಗೂ ಪ್ರೇರಣೆಯಾಗಿದ್ದು ಇತ್ತೀಚಿಗಷ್ಟೇ ಹೂ ಮತ್ತು ಮಾಲೆಗಳನ್ನು ನಿಷೇಧ ಮಾಡಿರುವ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿನ ನಡುವೆಯೇ ಇವರು ಇಂಥಹದೊಂದು ಕೆಲಸ ಮಾಡು ತ್ತಿದ್ದು ಮೆಚ್ಚುವಂತಾಗಿದ್ದು ಸುರೇಶ ಗೋಕಾಕ ಮತ್ತು ಟೀಮ್ ಕಾರ್ಯ ಇತರರಿಗೆ ಪ್ರೇರಣೆ ಮಾದರಿಯಾಗಿದೆ.