ಧಾರವಾಡ – ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ಬೆಂಬಲಿಸಿ ರಸ್ತೆ ತಡೆ ನಡೆಸಲು ಮುಂದಾಗಿದ್ದ ಕರವೇ ಕಾರ್ಯಕರ್ತರನ್ನು ಧಾರವಾಡದಲ್ಲಿ ಬಂಧಿಸಲಾಯಿತು. ಪ್ರತಿಭಟನೆಗೆ ಮುಂದಾಗಿದ್ದ 30ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಧಾರವಾಡದಲ್ಲಿ ಪೊಲೀಸರು ಬಂಧಿಸಿದ್ದಾರೆ. ನಗರದ ಜುಬಿಲಿ ವೃತದಲ್ಲಿ ಕರ್ನಾಟಕ ಬಂದ್ ಕರೆಗೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ್ರ ಬಣದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು.
ಸ್ವಲ್ಪ ಸಮಯದ ನಂತರ ರಸ್ತೆ ತಡೆಗೆ ಕಾರ್ಯಕರ್ತರು ಮುಂದಾಗುತ್ತಿದಂತೆ ಮಧ್ಯ ಪ್ರವೇಶ ಮಾಡಿದ ಧಾರವಾಡ ವಿಭಾಗದ ಎಸಿಪಿ ಅನುಷಾ,ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ ,ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ಮಹಾಂತೇಶ ಬಸಾಪುರ,ಶಹರ ಠಾಣೆ ಇನ್ಸ್ಪೆಕ್ಟರ್ ಶ್ರೀಧರ ಸತಾರೆ,ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಮಲಗೌಡ ನಾಯ್ಕರ್, ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕರ್ತರನ್ನು ಬಂಧಿಸಿದರು.
ಇನ್ನೂ ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಬಂಧಿಸಲು ಬಂದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕರವೇ ಕಾರ್ಯಕರ್ತರು ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಂಧಿಸಲು ಬಂದ ಪೊಲೀಸರ ಮತ್ತು ಕರವೇ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿಯು ನಡೆಯಿತು. ನೀವು ಪ್ರತಿಭಟನೆ ಮಾತ್ರ ಮಾಡಿ, ರಸ್ತೆ ತಡೆ ನಡೆಸುವ ಹಾಗಿಲ್ಲ ಎಂದು ಪೊಲೀಸರು ಪ್ರತಿಭಟನಕಾರಿಗೆ ತಿಳಿ ಹೇಳುದರು. ಪೊಲೀಸ್ ಅಧಿಕಾರಿಗಳ ಮಾತು ಕೇಳದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.ಈ ಒಂದು ಪ್ರತಿಭಟನೆಯಲ್ಲಿ ಕರವೇ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನೂ ಬಂದ್ ಮತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ಜುಬಲಿ ವೃತ್ತದಲ್ಲಿ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಭದ್ರತೆ ಒದಗಿಸಿದ್ದರು.