ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಆಕ್ಸಿಮೀಟ ರ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಐದು ಮೆಡಿಕ ಲ್ ಶಾಪ್ ಗಳ ಮೇಲೆ ದಾಳಿ ಮಾಡಲಾಗಿದೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ನಗರದ ಔಷಧ ಅಂಗಡಿಗಳಲ್ಲಿ ತಪಾಸಣೆ ನಡೆಸಿದ ರು.ಆಕ್ಸಿ ಮೀಟರ್ ಪೊಟ್ಟಣಗಳ ಮೇಲೆ ಕಾನೂನು ಮಾಪನ ಶಾಸ್ತ್ರ ಕಾಯಿದೆ ಅನ್ವಯ ನಿಗದಿತ ಮಾಹಿ ತಿಗಳನ್ನು ಮುದ್ರಿಸದೇ ಮಾರಾಟಕ್ಕೆ ಇಟ್ಟ ಹಿನ್ನಲೆ ಯಲ್ಲಿ ಐದು ಅಂಗಡಿಗಳ ವಿರುದ್ಧ ಮೊಕದ್ದಮೆ ಗಳನ್ನು ದಾಖಲಿಸಿದರು.
ಕಾಯಿದೆಗಳ ಬಗ್ಗೆ ಎಲ್ಲ ಅಂಗಡಿಕಾರರಿಗೆ ತಿಳಿಸಿ ಹೇಳಲಾಯಿತು, ಅಲ್ಲದೆ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ ತೆಗೆದುಕೊಳ್ಳು ವದಾಗಿ ಎಚ್ಚರಿಕೆ ಸಹ ನೀಡಲಾಯಿತು. ಕಾರ್ಯಚ ರಣೆಯಲ್ಲಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ನಿಯಂತ್ರಕರಾದ ಮಧುಕರ.ರಾ. ಘೋ ಡಕೆ ಹಾಗೂ ನಿರೀಕ್ಷಕರಾದ ಸಿದ್ದಪ್ಪ.ಪೂಜಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.