ಧಾರವಾಡ –
ಬೇಸಿಗೆ ರಜೆಯ ವಿಚಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರೌಢ ಶಾಲಾ ಶಿಕ್ಷಕರಿಗೆ ಅನ್ಯಾಯವನ್ನು ಮಾಡಿದ್ದು ನ್ಯಾಯವನ್ನು ಒದಗಿಸುವಂತೆ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾ ಜ ಗುರಿಕಾರ ಒತ್ತಾಯ ಮಾಡಿದ್ದಾರೆ.ಬೇಸಿಗೆ ರಜೆಯ ಅವಧಿಯನ್ನು ನಿಗದಿಗೊಳಿಸಿದ್ದು ಇದರಿಂದ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಅನ್ಯಾಯವಾಗಿದೆ.ಇದನ್ನು ಸರಿಪಡಿಸಿ ಪ್ರೌಢಶಾಲಾ ಶಿಕ್ಷಕರುಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಏಕರೂಪದ ರಜೆ ವ್ಯವಸ್ಥೆ ಇಲ್ಲಿಯವರೆಗೆ ಇತ್ತು ಈಗ ಅದನ್ನು ಬದಲಾಯಿಸಿರುವುದು ಶೈಕ್ಷಣಿಕ ಆಡಳಿತ ದೃಷ್ಟಿ ಯಿಂದ ಸಮಂಜಸವಲ್ಲ.ಪ್ರಾಥಮಿಕ ಶಾಲೆಗಳಿಗೆ ನಿಗದಿಗೊಳಿಸಿದ ಬೇಸಿಗೆ ರಜೆ ಅವಧಿಯನ್ನು ಪ್ರೌಢ ಶಾಲೆಗಳಿಗೂ ನಿಗದಿಗೊಳಿಸಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.15-06-2021 ರಿಂ ದ 14-07-2021 ವರೆಗೆ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. 21-06-2021 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗುತ್ತದೆ.ನಂತರ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಆರಂಭವಾಗುತ್ತದೆ ಇದರಿಂದ ಪ್ರೌಢಶಾಲಾ ಶಿಕ್ಷಕರಿಗೆ ಬೇಸಿಗೆ ರಜೆ ಸೌಲಭ್ಯ ಸಿಗು ವುದಿಲ್ಲ.ಕರೋನಾ ದಂತಹ ಸಂಕಷ್ಟ ಸಮಯದ ಲ್ಲೂ ಸಹ ಶಿಕ್ಷಕರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ ಸರ್ಕಾರ ಈ ಕುರಿತು ಪುನ ರ್ ಪರಿಶೀಲನೆ ಮಾಡಿ ಮೇ ಒಂದರಿಂದಲೇ ಪ್ರೌಢ ಶಾಲಾ ಶಿಕ್ಷಕರಿಗುೂ ಬೇಸಿಗೆ ರಜೆ ಸೌಲಭ್ಯ ನೀಡ ಬೇಕೆಂದು ಗುರಿಕಾರ ವಿನಂತಿಸಿದ್ದಾರೆ