ಧಾರವಾಡ – ನನಗೆ ಸುಪಾರಿ ಕೊಡುವ ಬದಲಿಗೆ ಒಂದಿಷ್ಟು ವಿಷ ಕೊಟ್ಟಿದ್ದರೆ ಸಾಕಿತ್ತು.ಹೀಗೆಂದು ಯೊಗೀಶಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಬಸವರಾಜ ಮುತ್ತಗಿ ಹೇಳಿದರು. ಧಾರವಾಡದಲ್ಲಿ ಸಿಬಿಐ ಅಧಿಕಾರಿಗಳ ತನಿಖೆ ಎದುರಿಸಿ ಬಂದ ನಂತರ ಮಾತನಾಡಿದರು. ಯೊಗೇಶಗೌಡ ಕೊಲೆ ಪ್ರಕರಣವನ್ನು, ಸಿಬಿಐ ಅಧಿಕಾರಿಗಳು ದಿನೇ ದಿನೇ ವಿಚಾರಣೆ ತೀವ್ರಗೊಳ್ಳಿಸಿದ್ದು, ಹಲವು ಸ್ಪೋಟಕ ಮಾಹಿತಿಗಳನ್ನು ಹೊರಗೆ ಎಳಿಯುತ್ತಿದ್ದಾರೆ. ಅದರಲ್ಲಿ ಈಗ ಯೊಗೇಶಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಿಗೆಯನ್ನೇ ಹೊಡೆಯಲು ಸ್ಕೆಚ್ ಹಾಕಲಾಗಿದೆ ಎಂಬ ಸ್ಪೋಟಕ ಮಾಹಿತಿಯು ಈಗ ಕೇಳಿ ಬರುತ್ತಿದೆ.
ಇಂದು ಕೂಡಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಿಗೆಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ಕರೆದಿದ್ದರು, ಇನ್ನೂ ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ತನಿಖೆ ಮುಗಿಸಿ ಹೋರ ಬರುತ್ತಿರುವ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಸಿಬಿಐ ತನಿಖೆ ನಡೆಯುತ್ತಿದೆ, ಹಾಗಾಗಿ ಯಾವುದನ್ನು ಹೇಳೊದಕ್ಕೆ ಬರೊದಿಲ್ಲ ಎಂದರು.
ಚಂದ್ರಶೇಖರ ಇಂಡಿಯವರನ್ನು ಕರೆದುಕೊಂಡು ಬಂದಿರುವುದು ಅಕ್ರಮ ಶಸ್ತ್ರಾಸ್ತ್ರಗಳ ಸಾಗಾಟ ಮಾಡಿದಕ್ಕೆ ಸಿಬಿಐ ಅಧಿಕಾರಿಗಳು ಕರೆದುಕೊಂಡು ಬಂದಿರುತ್ತಾರೆ, ಆದರೆ ನಾನು ಯಾವುದನ್ನು ಹೇಳೋಕ್ಕೆ ಬರುವುದಿಲ್ಲ, ಇನ್ನೂ ನನ್ನ ಮುಗಿಸಲು ಸುಫಾರಿ ನೀಡಿದರು ಎಂಬ ವಿಚಾರ ನನಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ, ಅದರ ಬದಲು ನನಗೆ ಸ್ವಲ್ಪ ವಿಷ ಕೊಟ್ಟಿದ್ದರೆ ಸಾಕಾಗಿತ್ತು ಎಂದು ಮುತ್ತಿಗೆ ಹೇಳಿದ್ದಾರೆ.