ಧಾರವಾಡ –
ಭಾರತೀಯ ಜನತಾ ಪಕ್ಷದ ಧಾರವಾಡ ನಗರ ಘಟಕದ 71 ರ ಪಂಡಿತ ದೀನದಯಾಳ ಪ್ರಶಿಕ್ಷಣ ವರ್ಗ ಧಾರವಾಡದಲ್ಲಿ ಆರಂಭವಾಗಿದೆ. ನಗರದ ತೇಜಸ್ವಿನಗರದ ಸರೂರ ಫಾರ್ಮ ಹೌಸನಲ್ಲಿ ಇಂದಿನಿಂದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಆರಂಭಗೊಂಡಿದೆ.

ಕಾರ್ಯಕ್ರಮವನ್ನು ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿಯವರೊಂದಿಗೆ ಶಾಸಕರಾದ ಅರವಿಂದ ಬೆಲ್ಲದ ಮತ್ತು ಅಮೃತ ದೇಸಾಯಿ ಉದ್ಘಾಟಿಸಿದ್ರು.

ಸಸಿಗೆ ನೀರು ಎರೆಯುವುದರ ಮೂಲಕ ಅಭ್ಯಾಸ ವರ್ಗಕ್ಕೇ ಚಾಲನೆ ನೀಡಿದರು. ಅಭ್ಯಾಸ ವರ್ಗಕ್ಕೇ ಚಾಲನೆ ನೀಡಿ ನಂತರ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ ದೇಶದಲ್ಲಿ ನಡೆದ 58 ಚುನಾವಣೆಯಲ್ಲಿ 42 ಚುನಾವಣೆ ಬಿಜೆಪಿ ಗೆಲವು ಸಾಧಿಸಿದೆ.

ಇದೀಗ ಬಿಜೆಪಿ ಸೋಲಿಸಲು ಎಲ್ಲರೂ ಒಂದಾಗುವ ಸ್ಥಿತಿ ಇದ್ದು ಹಿಂದೆ ಕಾಂಗ್ರೆಸ್ ಎದುರಿಸಲು ಎಲ್ಲರು ಒಗ್ಗೂಡುತ್ತಿದ್ದರು.ಬಿಜೆಪಿ ಕಳೆದ ಎರಡು ದಶಕಗಳಲ್ಲಿ ಗಣನೀಯ ಸಾಧನೆ ಮಾಡಿದ್ದು, 2014-282, 2019-303 ಸ್ಥಾನ ಗೆದ್ದಿದೆ. ಶೇ.6 ರಷ್ಟು ಮತದಾನ ಹೆಚ್ಚಳವಾಗಿದೆ.

ಇದೀಗ ಸರ್ವ ವ್ಯಾಪ್ತಿಯಲ್ಲಿ ಬಿಜೆಪಿ ಅಕ್ಷರಶಃ ಮನೆ ಮಾಡಿರುವುದು ಅಭಿಮಾನ ಮೂಡಿಸಿದ್ದು ಇನ್ನೂ ಮೋದಿ ಪರಿಶ್ರಮದ ಫಲವಾಗಿ ಕೃಷಿ, ಆರ್ಥಿಕತೆ, ಸೇನೆ, ರಕ್ಷಣೆ ಹಾಗೂ ಸರ್ವರಂಗದಲ್ಲೂ ಆಮೂಲಾಗ್ರ ಬದಲಾವಣೆ ಬಂದಿದೆ.

ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಜಗತ್ತಿನ ಎಲ್ಲ ರಾಷ್ಟ್ರಗಳು ಬಯಸುತ್ತಿವೆ ಎಂದರು.ಅಲ್ಲದೇ ಚೈನಾ ಸೈನಿಕರ ಮೊದಲ ಬಾರಿಗೆ ನಮ್ಮ ಮೇಲೆ ಬಂದಾಗ ಖಡಕ್ ಆಗಿ ಉತ್ತರ ಕೊಟ್ಟಿದ್ದು ಮೋದಿ ಸರ್ಕಾರ. ಜಾಗತಿಕವಾಗಿ ಭಾರತದ ಘೌರವ, ಘನತೆ ಹೆಚ್ಚಿದೆ.

ಎಂದರು. ರೈತರ ಆದಾಯ ದ್ವೀಗುಣವಾಗುತ್ತಿದೆ ಆದರೆ ಕೆಲ ಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ ಎಂದು ಆರೋಪಿಸಿದ ಅವರು ಸ್ವಾಮಿನಾಥನ್ ವರದಿ ಜಾರಿಗೆ ಮಾಡಿದ್ದು ಮೋದಿ ಸರ್ಕಾರ. ಇದನ್ನು ಸ್ವತಃ ಸ್ವಾಮಿನಾಥನ್ ಹೇಳಿದ್ದಾರೆ.ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕರಾದ ಅರವಿಂದ ಬೆಲ್ಲದ ಅಮೃತ ದೇಸಾಯಿ ಮಾತನಾಡಿ 2014ರ ನಂತರ ಬದಲಾದ ಭಾರತ ಹಾಗು ನಮ್ಮ ಜವಾಬ್ದಾರಿ ಬಗ್ಗೆ ವಿಸ್ತೃತವಾಗಿ ಮಾತನಾಡಿದರು.

ಇನ್ನೂ ಈ ಒಂದು ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಈರೇಶ ಅಂಚಟಗೇರಿ, ಸುಧಾ, ರೇಷ್ಮೇ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಸುನೀಲ ಮೋರೆ ಶಕ್ತಿ ಹಿರೇಮಠ , ಟಿ ಎಸ್ ಪಾಟೀಲ, ಈರಣ್ಣ ಹಪ್ಪಳಿ ,ಸವಿತಾ ಅಮರಶೆಟ್ಟಿ ,ಶ್ರೀನಿವಾಸ ಕೋಟ್ಯಾನ, ಸಂತೋಷ ದೇವರೇಡ್ಡಿ ,ಹರೀಶ್ ಬಿಜಾಪುರ ,ಸಿದ್ದು ಕಲ್ಯಾಣಶೆಟ್ಟಿ ಹಾಗೂ ಪ್ರಶಿಕ್ಷಣ ವರ್ಗದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು